ಮಂಗಳೂರು: ಸ್ಕೇಟಿಂಗ್ ರಿಂಗ್ ನಲ್ಲೇ ಹೊಡೆದಾಡಿಕೊಂಡ ಸ್ಪರ್ಧಿಗಳು, ವಿಡಿಯೋ ವೈರಲ್

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಕೇಟಿಂಗ್ ಪಟುಗಳಿಬ್ಬರು ಸ್ಕೇಟಿಂಗ್ ರಿಂಗ್ ನಲ್ಲೇ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ...
ಸ್ಕೇಟಿಂಗ್
ಸ್ಕೇಟಿಂಗ್
ಮಂಗಳೂರು: ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಕೇಟಿಂಗ್ ಪಟುಗಳಿಬ್ಬರು ಸ್ಕೇಟಿಂಗ್ ರಿಂಗ್ ನಲ್ಲೇ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ತಾಲತಾಣದಲ್ಲಿ ವೈರಲ್ ಆಗಿದೆ. 
ಮಂಗಳೂರಿನಲ್ಲಿ ರಾಜ್ಯ ಮಟ್ಟದ 33ನೇ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಡೆದಿತ್ತು. ಇದರಲ್ಲಿ ಸ್ಕೇಟಿಂಗ್ ಪಟುವೊಬ್ಬನನ್ನು ಮತ್ತೊಬ್ಬ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸ್ಕೇಟಿಂಗ್ ಪಟುಗಳು ಹೊಡೆದಾಡಿಕೊಂಡಿದ್ದಾರೆ. 
ಮಂಗಳೂರಿನ ಹೊಗೈಬೈಲ್ ನಲ್ಲಿರುವ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಹೈಫೈ ಸ್ಕೇಟಿಂಗ್ ಕ್ಲಬ್ ಪಂದ್ಯಾವಳಿಯನ್ನು ಆಯೋಜಿಸಿತ್ತು. ಸ್ಪರ್ಧೆ ಎಂದಾಗ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಆದರೆ ಇಲ್ಲಿ ಇಬ್ಬರು ಸ್ಕೇಟಿಂಗ್ ಪಟುಗಳು ಹೊಡೆದಾಡಿಕೊಂಡಿರುವುದು ಕ್ರೀಡಾ ಸ್ಫೂರ್ತಿಗೆ ವ್ಯತಿರಿಕ್ತವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com