ವುಶು ವಿಶ್ವ ಚಾಂಪಿಯನ್ಶಿಪ್: ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಪೂಜಾ ಕಡಿಯನ್

ಭಾರತದ ಪೂಜಾ ಕಡಿಯನ್ ವುಶು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ...
ಪೂಜಾ ಕಡಿಯಾನ್
ಪೂಜಾ ಕಡಿಯಾನ್
ನವದೆಹಲಿ: ಭಾರತದ ಪೂಜಾ ಕಡಿಯನ್ ವುಶು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 
ವುಶು ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಕಝಾನ್ ನಲ್ಲಿ ನಡೆದ ಚಾಂಪಿಯನ್ ಶಿಪ್ ನಲ್ಲಿ ಪೂಜಾ ಮಹಿಳೆಯರ 75 ಕೆಜಿ ತೂಕ ವಿಭಾಗದ ಫೈನಲ್ ಪಂದ್ಯದಲ್ಲಿ ರಷ್ಯಾದ ಇವಿಜಿನಿಯಾ ಸ್ಟೀಪನೋವಾರನ್ನು ಮಣಿಸಿದರು. 
ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಪೂಜಾ ಈಜಿಪ್ಟ್ ನ ಹೆಬಾ ಅದ್ಬುಲ್ ಖಾದರ್ ರನ್ನು 2-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com