ಶ್ರೀಲಂಕಾ ವಿರುದ್ಧದ ಮಿಶ್ರ ಡಬಲ್ಸ್ ವಿಭಾಗದ ಪಂದ್ಯಗಳಲ್ಲಿ ಭಾರತ 5-0 ಅಂತರದ ಜಯ ಸಾಧಿಸಿದ್ದು, ದಿನದ ಆರಂಭದಲ್ಲೇ ಭಾರತದ ಪ್ರಣಾವ್ ಚೋಪ್ರಾ ಮತ್ತು ಋತ್ವಿಕಾ ಗಡ್ಡೆ ಜೋಡಿ ಲಂಕಾದ ಸಚಿನ್ ಡಯಾಸ್ ಮತ್ತು ತಿಲಿನಿ ಪ್ರಮೋದಿಕಾ ವಿರುದ್ಧ 21-15 19-21 22-20 ನೇರ ಸೆಟ್ ಗಳ ಜಯ ಗಳಿಸಿತು. ಇದರ ಬೆನ್ನಲ್ಲೇ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಕಿದಾಂಬಿ ಶ್ರೀಕಾಂತ್, ಲಂಕಾದ ನಿಲುಕಾ ಕರುಣಾರತನೆ ಅವರನ್ನು 21-16 21-10 ಅಂತರದಲ್ಲಿ ಮಣಿಸಿದರು. ಬಳಿಕ ನಡೆದ ಪುರುಷರ ಡಬಲ್ಸ್ ಪಂದ್ಯದಲ್ಲಿ ಸಾತ್ವಿಕ್ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಲಂಕಾದ ದಿನುಕಾ ಕರುಣಾರತ್ನಾ ಮತ್ತು ಬುವಾನೆಕಾ ಗುಯೊನ್ಥಿಲ್ಕೆಯಾ ವಿರುದ್ಧ 21-17 21-14 ಅಂತರದ ಜಯಗಳಿಸಿದರು.