53 ಕೆಜಿ ತೂಕದ ವಿಭಾಗದಲ್ಲಿ ಸಂಜಿತಾ ಚಾನು ಅಗ್ರ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ. ಮೂರು ಹಂತಗಳ ಸ್ಪರ್ಧೆಯಲ್ಲಿ ಕ್ರಮವಾಗಿ 81 ಕೆಜಿ, 82ಕೆಜಿ ಮತ್ತು 84 ಕೆಜಿ ಸೇರಿದಂತೆ ಸಂಜಿತಾ ಚಾನು ಒಟ್ಟು 192 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. ಇನ್ನು 182 ಕೆಜಿ ತೂಕ ಎತ್ತಿದ ಪಪುವಾ ನ್ಯೂಗಿನಿಯಾದ ಲೋಡಿಕಾ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಗಳಿಸಿದರೆ, ನ್ಯೂಜಿಲೆಂಡ್ ನ ರಾಚೆಲ್ ಲೆಬ್ಲಾಂಕ್-ಬಾಝಿನೆಟ್ ಅವರು ಒಟ್ಟು 181 ಕೆಜಿ ತೂಕ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಭಾಜನರಾದರು.