'ಭಾರತೀಯ ನಾರಿ ಸಬ್ ಪರ್ ಬಾರಿ': ಚಿನ್ನ ಗೆದ್ದ ಸಂಜಿತಾ ಚಾನುಗೆ ವೀರೂ ಅಭಿನಂದನೆ!

, 53 ಕೆಜಿ ವಿಭಾಗದ ಮಹಿಳೆಯ ಸ್ಪರ್ಧೆಯಲ್ಲಿ ಮಣಿಪುರ ಸಂಜಿತಾ ಚಾನು ಚಿನ್ನದ ಪದಕಗಳಿಸಿಕೊಡುವ ಮೂಲಕ ದೇಶದ ಕ್ರೀಡಾಪ್ರೇಮಿಗಳ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಚಿನ್ನ ಗೆದ್ದ ಸಂಜಿತಾ ಚಾನು
ಚಿನ್ನ ಗೆದ್ದ ಸಂಜಿತಾ ಚಾನು
Updated on: 
ನವದೆಹಲಿ: ಕಾಮನ್ ವೆಲ್ತ್ ಗೇಮ್ಸ್ ನ 2ನೇ ದಿನವೂ ಭಾರತೀಯ ವೇಟ್ ಲಿಫ್ಟರ್ ಗಳು ಚಿನ್ನ ತಂದುಕೊಟ್ಟಿದ್ದು, 53 ಕೆಜಿ ವಿಭಾಗದ ಮಹಿಳೆಯ ಸ್ಪರ್ಧೆಯಲ್ಲಿ ಮಣಿಪುರ ಸಂಜಿತಾ ಚಾನು ಚಿನ್ನದ ಪದಕಗಳಿಸಿಕೊಡುವ ಮೂಲಕ ದೇಶದ ಕ್ರೀಡಾಪ್ರೇಮಿಗಳ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಪ್ರಮುಖವಾಗಿ ಭಾರತೀಯ ಕ್ರಿಕೆಟ್ ತಂಡ ಮಾಜಿ ಸ್ಫೋಟಕ ಬ್ಯಾಟ್ಸಮನ್ ವೀರೇಂದ್ರ ಸೆಹ್ವಾಗ್ ತಮ್ಮದೇ ವಿಶಿಷ್ಟ ಧಾಟಿಯಲ್ಲಿ ಸಂಜಿತಾ ಚಾನುಗೆ ಅಭಿನಂದನೆ ತಿಳಿಸಿದ್ದು, 'ಭಾರತೀಯ ನಾರಿ ಸಬ್ ಪರ್ ಬಾರಿ', ಮತ್ತೊಂದು ಚಿನ್ನ.. ಅಭಿನಂದನೆಗಳು ಸಂಜಿತಾ ಚಾನು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಸೆಹ್ವಾಗ್ ಮಾತ್ರವಲ್ಲದೇ ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷಾ ಭೋಗ್ಲೆ, ಖ್ಯಾತ ಪತ್ರಕರ್ತ ರಜತ್ ಶರ್ಮಾ, ಕೇಂದ್ರ ಸಚಿವ ರಾಜ್ಯ ವರ್ಧನ್ ಸಿಂಗ್ ರಾಥೋಡ್ ಸೇರಿದಂತೆ ಹಲವು ಖ್ಯಾತ ನಾಮರು ಸಂಜಿತಾ ಚಾನುಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಇಂದು ನಡೆದ ಮಹಿಳೆಯ 53 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಸಂಜಿತಾ ಚಾನು ಕ್ರಮವಾಗಿ 81 ಕೆಜಿ, 82ಕೆಜಿ ಮತ್ತು 84 ಕೆಜಿ ಸೇರಿದಂತೆ ಒಟ್ಟು 192 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com