ಅಂಗಳದಲ್ಲೇ ಗೆಳತಿಗೆ ಪ್ರೇಮ ನಿವೇಧನೆ ಮಾಡಿದ ಇಂಗ್ಲೆಂಡ್ ಬಾಸ್ಕೆಟ್ ಬಾಲ್ ಆಟಗಾರ!

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಇಂಗ್ಲೆಂಡ್ ಬಾಸ್ಕೆಟ್ ಬಾಲ್ ತಂಡದ ಆಟಗಾರ ಜಮೆಲ್ ಆ್ಯಂಡರ್ ಸನ್ ತಮ್ಮ ಗೆಳತಿ...
ಜಮೆಲ್ ಆ್ಯಂಡರ್ ಸನ್, ಜಾರ್ಜಿಯಾ ಜೋನೆಸ್
ಜಮೆಲ್ ಆ್ಯಂಡರ್ ಸನ್, ಜಾರ್ಜಿಯಾ ಜೋನೆಸ್
Updated on: 
ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಇಂಗ್ಲೆಂಡ್ ಬಾಸ್ಕೆಟ್ ಬಾಲ್ ತಂಡದ ಆಟಗಾರ ಜಮೆಲ್ ಆ್ಯಂಡರ್ ಸನ್ ತಮ್ಮ ಗೆಳತಿ ಇಂಗ್ಲೆಂಡ್ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಆಟಗಾರ್ತಿ ಜಾರ್ಜಿಯಾ ಜೋನ್ಸ್ ಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. 
ಬಾಸ್ಕೆಟ್ ಬಾಲ್ ಅಂಗಳದಲ್ಲೇ ಜಮೆಲ್ ಜಾರ್ಜಿಯಾಗೆ ಮದುವೆಯಾಗುವಂತೆ ಪ್ರಸ್ತಾಪವಿಟ್ಟದ್ದರು. ಈ ಅನಿರೀಕ್ಷಿತ ಘಟನೆಯಿಂದ ಜಾರ್ಜಿಯಾ ದಂಗಾದರು ನಂತರ ಜಮೆಲ್ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಾರೆ. 
ಕೂಡಲೇ ಜಮೆಲ್ ಅಂಗಳದಲ್ಲೇ ಜಾರ್ಜಿಯಾಗೆ ನಿಶ್ಚಿತಾರ್ಥ ಉಂಗುರವನ್ನು ತೊಡಿಸಿದರು. ಈ ಕೆಲ ದಿನಗಳಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com