20 ವರ್ಷದಲ್ಲೇ ಇದು ಮಹಿಳೆಯರ 100 ಮೀ. ಓಟದಲ್ಲಿ ದೇಶಕ್ಕೆ ಮೊದಲ ಬೆಳ್ಳಿ ಪದಕವಾಗಿದ್ದು, 11.32 ಸೆಕೆಂಡ್‌ನಲ್ಲಿ ದ್ಯುತಿ ಗುರಿ ತಲುಪಿದ್ದಾರೆ. ದ್ಯುತಿ ಈ ಹಿಂದೆ 11.29 ಸೆಕೆಂಡ್‌ನಲ್ಲಿ ದಾಖಲೆ ಸ್ಥಾಪಿಸಿದ್ದರು. ಏಷ್ಯನ್ ಗೇಮ್ಸ್ ನಲ್ಲಿ 100 ಮೀ. ಡ್ಯಾಶ್ ಅತ್ಯಂತ ಪ್ರತಿಷ್ಟಿತ ಸ್ಪರ್ಧೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದ್ದ ಈ ಪಂದ್ಯದಲ್ಲಿ ಭಾರತ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ.