ಇಂಡೋನೇಷ್ಯಾ ಮಾಸ್ಟರ್ಸ್: ಫೈನಲ್ ನಲ್ಲಿ ಸೈನಾ ನೆಹ್ವಾಲ್ ಗೆ ಸೋಲು!

ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಭಾರತದ ಪ್ರಶಸ್ತಿ ಆಸೆ ಕಮರಿದ್ದು, ಭಾರತದ ಅಗ್ರ ಕ್ರಮಾಂಕದ ಶಟ್ಲರ್​ ಸೈನಾ ನೆಹ್ವಾಲ್​ ಅವರು ಮಹಿಳೆಯರ ಸಿಂಗಲ್ಸ್​ ವಿಭಾಗದ ಫೈನಲ್​ ನಲ್ಲಿ ಸೋಲು ಅನುಭವಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜಕಾರ್ತಾ: ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿ ಭಾರತದ ಪ್ರಶಸ್ತಿ ಆಸೆ ಕಮರಿದ್ದು, ಭಾರತದ ಅಗ್ರ ಕ್ರಮಾಂಕದ ಶಟ್ಲರ್​ ಸೈನಾ ನೆಹ್ವಾಲ್​ ಅವರು ಮಹಿಳೆಯರ ಸಿಂಗಲ್ಸ್​ ವಿಭಾಗದ ಫೈನಲ್​ ನಲ್ಲಿ ಸೋಲು  ಅನುಭವಿಸಿದ್ದಾರೆ.
ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ 3 ಬಾರಿ ಇಂಡೋನೇಷ್ಯಾ ಮಾಸ್ಟರ್ಸ್​ ಪ್ರಶಸ್ತಿ ವಿಜೇತೆ ಸೈನಾ ನೆಹ್ವಾಲ್​ ವಿಶ್ವದ ನಂ. 1 ಆಟಗಾರ್ತಿ ತೈವಾನ್ ​ನ ತಾಯ್​ ತ್ಸು ಯಿಂಗ್​ ಅವರ ವಿರುದ್ದ 21-9, 21-13 ನೇರ ಸೆಟ್ ಗಳ  ಅಂತರದಿಂದ ಸೋಲು ಅನುಭವಿಸಿದರು. ಆ ಮೂಲಕ ವರ್ಷದ ಮೊದಲ ಪ್ರಮುಖ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತರಾದರು. ಕೇವಲ 27 ನಿಮಿಷ ನಡೆದ ಪಂದ್ಯದಲ್ಲಿ ಆರಂಭದಿಂದಲೂ ಪಂದ್ಯದ ಮೇಲೆ ಬಿಗಿ  ಹಿಡಿತ ಸಾಧಿಸಿದ್ದ ತೈವಾನ್ ಆಟಗಾರ್ತಿ ಅರ್ಹವಾಗಿಯೇ ಪ್ರಶಸ್ತಿಗೆ ಮುತ್ತಿಟ್ಟರು.
ಶನಿವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಸೈನಾ 4ನೇ ಶ್ರೇಯಾಂಕಿತ ಆಟಗಾರ್ತಿ ಥಾಯ್ಲೆಂಡ್ ​ನ ರಾಚನೋಕ್​ ಇಂಥನಾನ್​ ಅವರ ವಿರುದ್ಧ 21-19, 21-19 ಅಂತರದಿಂದ ಗೆಲುವು ಸಾಧಿಸಿ ಫೈನಲ್​ ತಲುಪಿದ್ದರು. ಫೈನಲ್  ಪರಾಭವದೊಂದಿಗೆ ಸೈನಾ ರನ್ನರ್ ಅಪ್ ಆಗಿ ಟೂರ್ನಿ ಮುಕ್ತಾಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com