ಇಂಡೋನೇಷ್ಯಾ ಓಪನ್: ಸಿಂಧೂ, ಪ್ರಣೋಯ್ ಗೆ ಸೋಲು

ಪ್ರತಿಷ್ಠಿತ ಇಂಡೋನೇಷ್ಯಾ ಬಿಎಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 1000 ಟೂರ್ನಮೆಂಟ್‌ ನಲ್ಲಿ ಕ್ವಾರ್ಟರ್ ಫೈನಲ್ಸ್ ಹಂತ ತಲುಪಿದ್ದ ಭಾರತದ ಪಿವಿ ಸಿಂಧೂ ಹಾ.....
ಇಂಡೋನೇಷ್ಯಾ ಓಪನ್: ಸಿಂಧೂ, ಪ್ರಣೋಯ್ ಗೆ ಸೋಲು
ಇಂಡೋನೇಷ್ಯಾ ಓಪನ್: ಸಿಂಧೂ, ಪ್ರಣೋಯ್ ಗೆ ಸೋಲು
Updated on
ಜಕಾರ್ತಾ(ಇಂಡೋನೇಷಿಯಾ):  ಪ್ರತಿಷ್ಠಿತ ಇಂಡೋನೇಷ್ಯಾ ಬಿಎಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 1000 ಟೂರ್ನಮೆಂಟ್‌ ನಲ್ಲಿ ಕ್ವಾರ್ಟರ್ ಫೈನಲ್ಸ್ ಹಂತ ತಲುಪಿದ್ದ ಭಾರತದ ಪಿವಿ ಸಿಂಧೂ ಹಾಗೂ ಎಚ್‌ಎಸ್ ಪ್ರಣೋಯ್ ಸೋಲಿನ ಆಘಾತ ಅನುಭವಿಸಿದ್ದಾರೆ.
ಶುಕ್ರವಾರದ ಪಂದ್ಯದಲ್ಲಿ ಪಿವಿ ಸಿಂಧೂ  ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ 21-14, 21-15ರ ಅಂತರದಲ್ಲಿ ಸೋಲು ಕಂಡಿದ್ದಾರೆ.
ಪುರುಷರ ಕ್ವಾರ್ಟರ್ ಫೈನಲ್ಸ್ ಹಂತ ತಲುಪಿ ಪ್ರಶಸ್ತಿಯ ಆಸೆ ಮೂಡಿಸಿದ್ದ  ಪ್ರಣೋಯ್ ಸಹ  ಶಿ ಯೂಕಿ ವಿರುದ್ಧ 21-17, 21-18ರ ಅಂತರದಲ್ಲಿ ಪರಾಭವಗೊಂಡಿದ್ದಾರೆ.
ಕಳೆದ ವಾರ ಮಲೇಷ್ಯಾ ಓಪನ್ ನಲ್ಲಿ ಸೆಮಿ ಫೈನಲ್ಸ್ ನಲ್ಲಿ ಸೋತು ಮರಳಿದ್ದ ಸಿಂಧೂ ಭಾರತದ ಪಾಲಿಗೆ ಇಂಡೋನೇಷ್ಯಾ ಓಪನ್ ಗೆಲ್ಲುವ ಭರವಸೆಯ ಆಟಗಾರ್ತಿಯಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com