ಜೂನಿಯರ್ ಏಷ್ಯಾನ್ ಚಾಂಪಿಯನ್‌ಶಿಪ್‌: ಭಾರತೀಯರ ಪದಕ ಬೇಟೆ, ಸಚಿನ್, ದೀಪಕ್‌ಗೆ ಚಿನ್ನ!

2018ರ ಜೂನಿಯರ್ ಏಷ್ಯಾನ್ ಚಾಂಪಿಯನ್‌ಶಿಪ್‌ ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು ಕುಸ್ತಿಪಟುಗಳಾದ ಸಚಿನ್ ರಾಥಿ ಮತ್ತು ದೀಪಕ್ ಪುನಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ...
ಸಚಿನ್ ರಾಥಿ, ದೀಪಕ್ ಪುನಿಯಾ
ಸಚಿನ್ ರಾಥಿ, ದೀಪಕ್ ಪುನಿಯಾ
ನವದೆಹಲಿ: 2018ರ ಜೂನಿಯರ್ ಏಷ್ಯಾನ್ ಚಾಂಪಿಯನ್‌ಶಿಪ್‌ ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದ್ದು ಕುಸ್ತಿಪಟುಗಳಾದ ಸಚಿನ್ ರಾಥಿ ಮತ್ತು ದೀಪಕ್ ಪುನಿಯಾ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. 
ಕುಸ್ತಿ ವಿಭಾಗದಲ್ಲಿನ 74 ಕೆಜಿ ತೂಕದ ಫ್ರೀಸ್ಟೈಲ್ ಕುಸ್ತಿಯಲ್ಲಿ ಸಚಿನ್ ರಾಥಿ ಮಂಗೊಲಿಯಾದ ಬ್ಯಾಟ್ ಎರ್ಡೆನ್ ಬೈಯಾಂಬರನ್ ವಿರುದ್ಧ ಗೆಲುವು ಸಾಧಿಸಿ ಚಿನ್ನದ ಪದಕ್ಕೆ ಮುತ್ತಿಟ್ಟರು. 
ಇನ್ನು 86 ಕೆಜಿ ತೂಕದ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ದೀಪಕ್ ಪುನಿಯಾ ತುರ್ಕ್‌ಮೆನಿಸ್ತಾನ್ ದ ಆಜಾತ್ ಗಜ್ಯೇವ್ ರನ್ನು 10-0 ಅಂಕಗಳೊಂದಿಗೆ ಸೋಲಿಸಿ ಗೆಲುವಿನ ನಗೆ ಬೀರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com