ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸಲಿರುವ ಬ್ರೆಜಿಲ್ ಫುಟ್ ಬಾಲ್ ತಾರೆ ರೊನಾಲ್ಡಿನೋ

ಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಪತ್ನಿಯರ ವರಿಸಲು ಸಿದ್ಧರಾಗಿ ನಿಂತಿದ್ದಾರೆ.
ತನ್ನ ಪ್ರಿಯತಮೆಯರೊಂದಿಗೆ ರೊನಾಲ್ಡಿನೋ
ತನ್ನ ಪ್ರಿಯತಮೆಯರೊಂದಿಗೆ ರೊನಾಲ್ಡಿನೋ
Updated on
ರಿಯೋ ಡಿ ಜನೈರೋ: ಬ್ರೆಜಿಲ್ ದೇಶದ ಖ್ಯಾತ ಫುಟ್ ಬಾಲ್ ತಾರೆ ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರನ್ನು ವರಿಸಲು ಸಿದ್ಧರಾಗಿ ನಿಂತಿದ್ದಾರೆ.
ಹೌದು..ಬ್ರೆಜಿಲ್ ಫುಟ್ ಬಾಲ್ ದಂತಕಥೆ ರೊನಾಲ್ಡಿನೋ ಇಬ್ಬರು ಪ್ರಿಯತಮೆಯರನ್ನು ಹೊಂದುವ ಮೂಲಕ ಈ ಹಿಂದೆ ಸುದ್ದಿಗೆ ಗ್ರಾಸವಾಗಿದ್ದರು. ಆದರೆ ಇದೀಗ ಏಕಕಾಲಕ್ಕೆ ಇಬ್ಬರು ಪತ್ನಿಯರನ್ನು ಹೊಂದುವ ಮೂಲಕ ಮತ್ತೆ ಸುದ್ದಿಗೆ  ಗ್ರಾಸವಾಗುತ್ತಿದ್ದಾರೆ.
ಬ್ರೆಝಿಲ್ ನ ಶ್ರೇಷ್ಟ ಫುಟ್ಬಾಲ್ ಆಟಗಾರ ರೊನಾಲ್ಡಿನೊ ಶೀಘ್ರದಲ್ಲೇ ತನ್ನ ಇಬ್ಬರು ಪ್ರಿಯತಮೆಯರನ್ನು ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ವಿವಾಹವಾಗಲಿದ್ದಾರೆ ಎಂದು ತಿಳಿದು ಬಂದಿದೆ. ಬ್ರೆಝಿಲ್ ನ ಓರ್ವ ಶ್ರೇಷ್ಟ ಫುಟ್ಬಾಲ್ ಆಟಗಾರನಾಗಿರುವ ರೊನಾಲ್ಡಿನೊ ಕಳೆದ ವರ್ಷ ತನ್ನ ಪ್ರಿಯತಮೆಯರಾದ ಪ್ರಿಸ್ಸಿಲ್ಲಾ ಕೊಯೆಲೊ ಮತ್ತು ಬೀಟ್ರಿಜ್ ಸೌಜಾರನ್ನು ವಿವಾಹವಾಗುವ ಬಗ್ಗೆ ಹೇಳಿಕೊಂಡಿದ್ದು, ಅವರಿಗೆ ನಿಶ್ಚಿತಾರ್ಥ ಉಂಗುರವನ್ನು ನೀಡಿದ್ದರು. 
ಅದರಂತೆ ರಿಯೋ ಡಿಜನೈರೊದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಇಬ್ಬರು ಯುವತಿಯರನ್ನು ಏಕ ಕಾಲದಲ್ಲಿ ರೊನಾಲ್ಡಿನೊ ವಿವಾಹವಾಗಲಿದ್ದಾರೆ ಎಂದು ಅಮೆರಿಕದ ದಿನ ಪತ್ರಿಕೆಯೊಂದು ವರದಿ ಮಾಡಿದೆ.
ಹಲವು ವರ್ಷಗಳಿಂದ ಪ್ರಿಸಿಲ್ಲಾ ರನ್ನು ಪ್ರೀತಿಸುತ್ತಿದ್ದ ರೊನಾಲ್ಡಿನೊ ಕಳೆದ ಎರಡು ವರ್ಷಗಳಿಂದ ಬ್ರಿಟಿಝ್ ಸೌಝಾರನ್ನು ಪ್ರೀತಿಸತೊಡಗಿದ್ದರು. ಇದೀಗ ಇವರಿಬ್ಬರನ್ನೂ ವರಿಸಲು ಸಿದ್ಧರಾಗಿದ್ದಾರೆ. ಇನ್ನು ರೊನಾಲ್ಡಿನೋ ನಿರ್ಧಾರಕ್ಕೆ ಇಬ್ಬರೂ ಪ್ರಿಯತಮೆಯರೂ ಒಪ್ಪಿಗೆ ಸೂಚಿಸಿದ್ದು, ಇಬ್ಬರೂ ಸಹಬಾಳ್ವೆ ನಡೆಸಲು ಸಿದ್ಧರಾಗಿದ್ದಾರಂತೆ. ಇನ್ನು ಈ ಜೋಡಿ ಕಳೆದ ಡಿಸೆಂಬರ್ ನಿಂದಲೂ ರಿಯೋ ಡಿಜನೈರೊ ದ ಮ್ಯಾನ್ಶೆರ್ ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬ್ರೆಜಿಲ್ ನಲ್ಲಿ ಬಹುಪತ್ನಿತ್ವಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎನ್ನಲಾಗಿದೆ. ಈ ಬಗ್ಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು ರೊನಾಲ್ಡಿನೋ ವಿವಾಹವಾಗಲಿದ್ದಾರೆ ಎಂದು ಅವರ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಬ್ರೆಜಿಲ್ ನಲ್ಲಿ ಬಹು ಪತ್ನಿತ್ವ ಅಪರಾಧವಾಗಿದ್ದು, ಇದಕ್ಕೆ ಆರು ವರ್ಷಗಳ ವರೆಗೂ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com