ಏಷ್ಯನ್ ಏರ್ ಗನ್ ಚಾಂಪಿಯನ್ ಶಿಪ್: ಸೌರಭ್ ಚೌಧರಿ, ಮನು ಭಾಕರ್ ಗೆ ದಾಖಲೆಯ ಚಿನ್ನ!

ಶುಕ್ರವಾರ ನಡೆದ 11 ನೇ ಏಷ್ಯನ್ ಏರ್ಗನ್ ಚಾಂಪಿಯನ್ ಶಿಪ್ ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಪ್ರದರ್ಶನದಲ್ಲಿ ಗೆಲ್ಲುವ ಮೂಲಕ ಭಾರತೀಯ ಶೂಟಿಂಗ್ ಪ್ರತಿಭೆಗಳಾದ ....
ಮನು ಭಾಕರ್ ಹಾಗೂ  ಸೌರಭ್ ಚೌಧರಿ
ಮನು ಭಾಕರ್ ಹಾಗೂ ಸೌರಭ್ ಚೌಧರಿ
ಕುವೈತ್: ಶುಕ್ರವಾರ ನಡೆದ 11ನೇ ಏಷ್ಯನ್ ಏರ್ಗನ್ ಚಾಂಪಿಯನ್ ಶಿಪ್ ನಲ್ಲಿ  10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಪ್ರದರ್ಶನದಲ್ಲಿ ಗೆಲ್ಲುವ ಮೂಲಕ ಭಾರತೀಯ ಶೂಟಿಂಗ್ ಪ್ರತಿಭೆಗಳಾದ ಮನು ಭಾಕರ್ ಹಾಗೂ  ಸೌರಭ್ ಚೌಧರಿ ನೂತನ ದಾಖಲೆ ನಿರ್ಮಾಣ ಮಾಡಿದ್ದಾರೆ.
ಪಂದ್ಯಾವಳಿಯ ಮುಕ್ತಾಯದ ದಿನದಂದು, ಫೈನಲ್ ಸುತ್ತಿನಲ್ಲಿ ಚೀನಾದ ಜೋಡಿ ವಾಂಗ್ ಕ್ಸಿಯಾಯೌ ಮತ್ತು ಹಾಂಗ್ ಶುಕಿ ಅವರನ್ನು ಭಾರತೀಯ ಜೋಡಿ ಪರಾಭವಗೊಳಿಸಿ ಚಿನ್ನದ ಪದಕ ಗಳಿಸಿದೆ.
ಈ ಸಾಲಿನ ಕ್ರೀಡಾಕೂಟದಲ್ಲಿ ಮಿಶ್ರ ತಂಡದ ಚಿನ್ನವೂ ಸೇರಿ ಭಾರತದ ಜೂನಿಯರ್ ಶೂಟಿಂಗ್ ತಂಡವು ನಾಲ್ಕು ಚಿನ್ನ ಸೇರಿದಂತೆ 11 ಪದಕಗಳನ್ನು ಗಳಿಸಿದೆ.
ಯೂತ್ ಒಲಂಪಿಕ್ ಗೇಮ್ಸ್ ಚಾಂಪಿಯನ್ ಮನು ಮತ್ತು ಸೌರಭ್ ಅವರು ಫೈನಲ್ ನಲ್ಲಿ 485.4 ಅಂಕ ಗಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com