ಆಸ್ಟ್ರೇಲಿಯನ್ ಓಪನ್: ನವೋಮಿ ಒಸಾಕಾ ಚಾಂಪಿಯನ್, ವಿಶ್ವ ನಂ.1 ಸ್ಥಾನಕ್ಕೇರಿದ ಏಷ್ಯಾದ ಮೊದಲ ಟೆನ್ನಿಸ್ ತಾರೆ!

ನವೋಮಿ ಒಸಾಕಾ ಹಾಗೂ ಪೆಟ್ರಾ ಕ್ವಿಟೋವಾ ನಡುವೆ ನಡೆದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಹಣಾಹಣಿಯಲ್ಲಿ ನವೋಮಿ ಒಸಾಕಾ ವಿಜೇತರಾಗಿದ್ದಾರೆ.
ನವೋಮಿ ಒಸಾಕಾ
ನವೋಮಿ ಒಸಾಕಾ
Updated on
ಮೆಲ್ಬೋರ್ನ್: ನವೋಮಿ ಒಸಾಕಾ ಹಾಗೂ ಪೆಟ್ರಾ ಕ್ವಿಟೋವಾ ನಡುವೆ ನಡೆದ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಹಣಾಹಣಿಯಲ್ಲಿ ನವೋಮಿ ಒಸಾಕಾ ವಿಜೇತರಾಗಿದ್ದಾರೆ. ಈ ಮೂಲಕ ಒಸಾಕಾ ಸತತ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ವಿಶ್ವ ನಂಬರ್ 1 ಸ್ಥಾನಕ್ಕೇರಿದ ಜಪಾನ್ ದೇಶದ, ಏಷ್ಯಾದ ಮೊದಲ ಟೆನ್ನಿಸ್ ಆಟಗಾರ್ತಿ ಎಂಬ ಗರಿಮೆಗೆ ಸಹ ಒಸಾಕಾ ಪಾತ್ರರಾಗಿದ್ದು ಶನಿವಾರ ನಡೆದ ಅಂತಿಮ ಹಣಾಹಣಿಯಲ್ಲಿ ಇವರು ಕ್ವಿಟೋವಾಅವರ ವಿರುದ್ಧ  7-6 (2), 5-7, 6-4 ಸೆಟ್ ಗಳ ಅಂತರದಿಂಡ ಜಯ ಸಾಧಿಸಿದ್ದಾರೆ.
ಇದಕ್ಕೆ ಹಿಂದೆ ಒಸಾಕಾ ಕಳೆದ ವರ್ಷ ಸಪ್ಟೆಂಬರ್ ನಲ್ಲಿ ನಡೆದ ಯುಎಸ್ ಓಪನ್ ಫೈನಲ್ಸ್ ನಲ್ಲಿ ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಒಸಾಕಾ ಸತತ ಎರಡು ಪ್ರಮುಖ ಚಾಂಪಿಯನ್ ಶಿಪ್ ಪ್ರಶಸ್ತಿಗಳನ್ನು ಗಳಿಸಿಕಿಒಂಡಿದ್ದು ಇದರ ಮೂಲಕ ಸೆರೆನಾ ವಿಲಿಯಮ್ಸ್ ಬಳಿಕ ಈ ಬಗೆಯ ಸಾಧನೆ ಮಾಡಿದ ಎರಡನೇ ಮಹಿಳೆಯಾಗಿದ್ದಾರೆ. ಸೆರೆನಾ ಅವರು 2014-15ರಲ್ಲಿ ನಾಲ್ಕು ಅತ್ಯ್ನ್ನತ ಚಾಂಪಿಯನ್ ಟ್ರೋಫಿಗಳಲ್ಲಿ ಸತತ ಜಯ ದಾಖಲಿಸಿ ನೂತನ ದಾಖಲೆ ನಿರ್ಮಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com