ಚೀನಾ ಓಪನ್: ಮೊದಲ ಸುತ್ತಿನಲ್ಲೇ ಸೈನಾಗೆ ಸೋಲಿನ ಆಘಾತ, ಕಶ್ಯಪ್ ಗೆ ಗೆಲುವಿನ ಸಿಂಚನೆ

ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆದಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಕಂಡಿದ್ದಾರೆ. 
ಸೈನಾ ನೆಹ್ವಾಲ್
ಸೈನಾ ನೆಹ್ವಾಲ್
Updated on

ಫಝೌ:  ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಭಾರತದ ಸೈನಾ ನೆಹ್ವಾಲ್ ಅವರು ಇಲ್ಲಿ ನಡೆದಿರುವ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಿರಾಸೆ ಕಂಡಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ನಂಬರ್ 1 ಆಟಗಾರ್ತಿ ಸೈನಾ 9-21, 12-21 ರಿಂದ ಚೀನಾದ ಕಾಯ್ ಯಾನ್ ಯಾನ್ ವಿರುದ್ಧ 24 ನಿಮಿಷದ ಕಾದಾಟದಲ್ಲಿ ಸೋಲು ಕಂಡರು. ಸೈನಾ ಹಾಗೂ ಕಾಯ್ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. 

ಪಂದ್ಯದ ಪ್ರಾರಂಭದಿಂದ ಸೈನಾ ಅವರ ಆಟವನ್ನರಿತು ಆಡಿದ ಎದುರಾಳಿ ಆಟಗಾರ್ತಿ ಅಂಕಗಲನ್ನು ಕಲೆ ಹಾಕುತ್ತಾ ಸಾಗಿದ್ದರು. ಅಲ್ಲದೆ ಸುಲಭವಾಗಿ ಯಾವ ಹಂತದಲ್ಲೂ ಸೈನಾ ಅಂಕ ಗಳಿಸಲು ಬಿಡಲಿಲ್ಲ. ಇದರಿಂದ ಎರಡು ನೇರ ಸೆಟ್ ಗಳಲ್ಲಿ ಭಾರತೀಯ ಆಟಗಾರ್ತಿ ಸೋಲು ಅನುಭವಿಸಿದ್ದಾರೆ.

ಇದೇ ವೇಳೆ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್21-14, 21-13ನಿಂದ ಥಾಯ್ ಲ್ಯಾಂಡಿನ ಸಿತಿಕೋಮ್ ಥಮ್ಮಸಿನ್ ವಿರುದ್ಧ ಗೆಲುವಿನ ನಗು ಬೀರಿದ್ದಾರೆ. ಅಲ್ಲದೆ ಮಿಶ್ರ ಡಬಲ್ಸ್ ನಲ್ಲಿ ಪ್ರಣವ್ ಚೋಪ್ರಾ, ಸಿಕ್ಕಿ ರೆಡ್ಡಿ ಜೋಡಿಗೆ ಆಘಾತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com