ಚಿನ್ನಗೆದ್ದ ಮೀರಾಬಾಯಿ ಚಾನು ರಾಷ್ಟ್ರೀಯ ದಾಖಲೆ!

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ನ್ಯಾಷನಲ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅವರು 49 ಕೆ.ಜಿ ವಿಭಾಗದಲ್ಲಿ 203 ಕೆ.ಜಿ ಬಾರ ಎತ್ತುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಜತೆಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡರು. 
ಮೀರಾಬಾಯಿ ಚಾನು
ಮೀರಾಬಾಯಿ ಚಾನು
Updated on: 

ಕೋಲ್ಕತಾ: ಕೋಲ್ಕತ್ತಾದಲ್ಲಿ ನಡೆಯುತ್ತಿರುವ ನ್ಯಾಷನಲ್ ವೇಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಅವರು 49 ಕೆ.ಜಿ ವಿಭಾಗದಲ್ಲಿ 203 ಕೆ.ಜಿ ಬಾರ ಎತ್ತುವ ಮೂಲಕ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವ ಜತೆಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡರು.

25ರ ಪ್ರಾಯದ ಮಣಿಪುರದ ಮೀರಾಬಾರಿ ಚಾನು ಸ್ನ್ಯಾಚ್ ವಿಭಾಗದಲ್ಲಿ 88 ಕೆ.ಜಿ ಹಾಗೂ ಎರಡನೇ ಪ್ರಯತ್ನದಲ್ಲಿ ಕ್ಲೀನ್ ಹಾಗೂ ಜೆರ್ಕ್‌ನಲ್ಲಿ 115 ಕೆ.ಜಿ ಬಾರ ಎತ್ತಿದರು. ಒಟ್ಟು 203 ಕೆ.ಜಿ ತೂಕ ಎತ್ತುವ ಮೂಲಕ ಸ್ವರ್ಣ ಪದಕ ತನ್ನದಾಗಿಸಿಕೊಂಡರು.

ಮಂಗಳವಾರ ಇವರ ಚಿನ್ನದ ಪದಕ ಸಾಧನೆಯೊಂದಿಗೆ ಮೀರಾಬಾಯಿ ಅವರು ವಿಶ್ವ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿದರು. ಮೊದಲನೇ ಸ್ಥಾನದಲ್ಲಿ ಚೀನಾದ ಜಿಯಾಂಗ್ ಹುಯಿಹವಾ(212), ನಂತರದ ಶ್ರೇಯಾಂಕದಲ್ಲಿ ಹೌ ಝಿಹುಯಿ (211ಕೆ.ಜಿ) ಹಾಗೂ ಕೊರಿಯಾದ ರೀ ಸಾಂಗ್ ಗುಮ್ (209ಕೆ.ಜಿ) ಇದ್ದಾರೆ.

ಕಳೆದ ವರ್ಷ ಥಾಯ್ಲೆಂಡ್ ನಲ್ಲಿ ಜರುಗಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೀರಾ 201 ಕೆ.ಜಿ ಬಾರ ಎತ್ತಿದ್ದರು. ಆ ಮೂಲಕ ನಾಲ್ಕನೇ ಸ್ಥಾನ ಪಡೆದಿದ್ದರು. ಇದೀಗ ಎರಡು ಕೆ.ಜಿ ಹೆಚ್ಚಿನ ಬಾರ ಎತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com