ವಿಜಯನಗರ: ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಕಿಚಡಿ ದಯಾನಂದ್ ಕೊರೋನಾದಿಂದ ಸಾವು

ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಕಿಚಡಿ ದಯಾನಂದ್ ಕೊರೋನಾ ಸೋಂಕಿನಿಂದ ಬುಧವಾರ ಮುಂಜಾನೆ ನಿಧನರಾದರು.
ಕಿಚಡಿ ದಯಾನಂದ್
ಕಿಚಡಿ ದಯಾನಂದ್
Updated on: 

ವಿಜಯನಗರ: ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಕಿಚಡಿ ದಯಾನಂದ್ ಕೊರೋನಾ ಸೋಂಕಿನಿಂದ ಬುಧವಾರ ಮುಂಜಾನೆ ನಿಧನರಾದರು.

ದಯಾನಂದ್ ಅವರಿಗೆ ಕಳೆದ ಒಂದು ವಾರದ ಹಿಂದೆ ಕೊರೋನಾ ಕಾಣಿಸಿಕೊಂಡಿತ್ತು.ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ತರಬೇತಿಗಾಗಿ ಕಾಶ್ಮೀರಕ್ಕೆ ತೆರಳಿದ್ದಾಗ ಅವರಿಗೆ ಕೊರೋನಾ ತಗುಲಿರುವ ಸಾಧ್ಯತೆ ಇತ್ತು ಎನ್ನಲಾಗಿದೆ.

ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ದಯಾನಂದ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಅವರ ಅಂತಿಮ ಸಂಸ್ಕಾರ ದಾವಣಗೆರೆಯಲ್ಲಿ ಕೋರೋಣ ವಿಧಿ ವಿಧಾನದ ಪ್ರಕಾರ ನಡೆಸಲಾಗುವುದು ಎಂದು ಮೂಲಗಳು ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com