ಟೋಕಿಯೊ ಒಲಿಂಪಿಕ್ಸ್: ಐರ್ಲೆಂಡ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ 1-0 ಅಂತರದ ಗೆಲುವು, ಕ್ವಾರ್ಟರ್ ಫೈನಲ್ ಪ್ರವೇಶ ಭರವಸೆ

ಭಾರತದ ಮಹಿಳಾ ಹಾಕಿ ತಂಡ ಶುಕ್ರವಾರ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಗೆಲುವು ಕಂಡಿದೆ. ಈ ಮೂಲಕ ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆಯನ್ನು ಬಲವಾಗಿ ಉಳಿಸಿಕೊಂಡಿದೆ.
ಭಾರತ ಮಹಿಳಾ ಹಾಕಿ ತಂಡ
ಭಾರತ ಮಹಿಳಾ ಹಾಕಿ ತಂಡ
Updated on

ಟೋಕಿಯೊ: ಭಾರತದ ಮಹಿಳಾ ಹಾಕಿ ತಂಡ ಶುಕ್ರವಾರ ಐರ್ಲೆಂಡ್ ವಿರುದ್ಧ 1-0 ಅಂತರದಲ್ಲಿ ಗೆಲುವು ಕಂಡಿದೆ. ಈ ಮೂಲಕ ಭಾರತದ ಮಹಿಳಾ ಹಾಕಿ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಆಸೆಯನ್ನು ಬಲವಾಗಿ ಉಳಿಸಿಕೊಂಡಿದೆ.

ಈ ಮುನ್ನ ರಾಣಿ ರಂಪಾಲ್ ನೇತೃತ್ವದ ಮಹಿಳಾ ಹಾಕಿ ತಂಡ ಮೊದಲ ಮೂರು ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಸೋಲು ಕಂಡಿತ್ತು.

ಭಾರತ ಮತ್ತು ಐರ್ಲೆಂಡ್ ವಿರುದ್ಧ ಇಂದು ನಡೆದ ಪಂದ್ಯದ ಮೊದಲ 15 ನಿಮಿಷಗಳಲ್ಲಿ ಯಾವುದೇ ಗೋಲು ಪಡೆಯಲು ಸಾಧ್ಯವಾಗಲಿಲ್ಲ. 15 ನಿಮಿಷಗಳ ಕೊನೆಗೆ ಸ್ಕೋರ್ ಲೈನ್ 0-0 ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com