FIFA World Cup 2026: ಜನಾಂಗೀಯ ನಿಂದನೆಯ ಸನ್ನೆ, ಈಜಿಪ್ಟ್ ಕೋಚ್ ಜೊತೆ ಮೆಸ್ಸಿ ಭಾರಿ ಜಗಳ! Video

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕೋಚ್ ಹಸ್ಸನ್ ಮಾಡಿರುವ ಸಂಜ್ಞೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Messi Clashes With Egypt Coach
ಈಜಿಪ್ಟ್ ಕೋಚ್ ಜೊತೆ ಮೆಸ್ಸಿ ಜಗಳ
Updated on

ಅಟ್ಲಾಂಟಾ: ಅರ್ಜೆಂಟೀನಾ ಮತ್ತು ಈಜಿಪ್ಟ್ ನಡುವಿನ ಫಿಫಾ ವಿಶ್ವಕಪ್ ಪಂದ್ಯದ ಕೊನೆಯಲ್ಲಿ, ಈಜಿಪ್ಟ್ ಮುಖ್ಯ ಕೋಚ್ ಹೊಸ್ಸಾಂ ಹಸನ್ ಮತ್ತು ಲಿಯೋನೆಲ್ ಮೆಸ್ಸಿ ನಡುವೆ ತೀವ್ರ ವಾಗ್ವಾದ ನಡೆದಿದೆ.

ಈಜಿಪ್ಟ್‌ನ ಗೋಲ್ ರದ್ದಾದ ನಂತರ ಆಕ್ರೋಶಗೊಂಡ ಕೋಚ್ ಹಸ್ಸನ್, ಮೆಸ್ಸಿ ಅವರೊಂದಿಗೆ ಮಾತನಾಡಿದ ಬಳಿಕ ರೆಫರಿಯ ಎದುರು ನಿಂತು ತಮ್ಮ ಕೈಗಳನ್ನು ಎಕ್ಸ್ ಆಕಾರದಲ್ಲಿ ಜೋಡಿಸಿ ಫಿಫಾದ ಸಾರ್ವತ್ರಿಕ ವರ್ಣಭೇದ ವಿರೋಧಿ ಸಂಕೇತ ಪ್ರದರ್ಶಿಸಿದ್ದಾರೆ.

ತೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಅರ್ಜೆಂಟೀನಾ ತಂಡವು 3-2 ಗೋಲುಗಳಿಂದ ಈಜಿಪ್ಟ್ ವಿರುದ್ಧ ವಿಜಯ ಸಾಧಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿತು.

ಆದಾಗ್ಯೂ, ಪಂದ್ಯದ ಕೊನೆಯಲ್ಲಿ ಟಚ್‌ಲೈನ್ ಬಳಿ ಲಿಯೋನೆಲ್ ಮೆಸ್ಸಿ ಅವರೊಂದಿಗೆ ವಾಗ್ವಾದ ನಡೆಸಿದ ಕೋಚ್ ಹೊಸ್ಸಾಂ ಹಸ್ಸನ್, ಫಿಫಾ ಅಧಿಕೃತ ವರ್ಣಭೇದ ವಿರೋಧಿ ಸೂಚಕವಾದ ತಮ್ಮ ಕೈಗಳನ್ನು ಎಕ್ಸ್ ಆಕಾರದಲ್ಲಿ ಜೋಡಿಸಿ ಫಿಫಾದ ಸಾರ್ವತ್ರಿಕ ವರ್ಣಭೇದ ವಿರೋಧಿ ಸಂಕೇತ ಪ್ರದರ್ಶಿಸಿದ್ದಾರೆ.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಕೋಚ್ ಹಸ್ಸನ್ ಮಾಡಿರುವ ಸಂಜ್ಞೆಯ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಸ್ಸನ್ ಬಳಿಗೆ ತೆರಳಿದ ಮೆಸ್ಸಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಮಧ್ಯಪ್ರವೇಶಿಸಿದ್ದಾರೆ.

Messi Clashes With Egypt Coach
FIFA World Cup 2026: ಕೊನೆಯ 15 ನಿಮಿಷದಲ್ಲಿ 3 ಗೋಲು; ಈಜಿಪ್ಟ್ ಮಣಿಸಿ ಕ್ವಾರ್ಟರ್ ಫೈನಲ್‌ಗೆ ಅರ್ಜೆಂಟೀನಾ ಲಗ್ಗೆ!

ಈಜಿಪ್ಟ್‌ನ ಬ್ಯಾಕ್‌ರೂಮ್ ಸಿಬ್ಬಂದಿಯೊಬ್ಬರು ಆಕ್ರೋಶಗೊಂಡು ಮೆಸ್ಸಿಯ ಕಡೆಗೆ ಬರುತ್ತಿದ್ದಂತೆ ಜಗಳ ತಾರಕ್ಕೇರಿದೆ. ಕೂಡಲೇ ಅರ್ಜೆಂಟೀನಾ ತಂಡದ ಆಟಗಾರರು ನಾಯಕನನ್ನು ರಕ್ಷಿಸಲು ಸುತ್ತುವರೆದಿದ್ದಾರೆ. ಭದ್ರತಾ ಸಿಬ್ಬಂದಿ ಮತ್ತು ರೆಫರಿ ತಂಡ ಇಬ್ಬರನ್ನು ಅಲ್ಲಿಂದ ಕರೆದುಕೊಂಡು ಹೋಗುವ ಮೂಲಕ ಪರಿಸ್ಥಿತಿಯಲ್ಲಿ ನಿಯಂತ್ರಣಕ್ಕೆ ತಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com