

ಪೋರ್ಚುಗಲ್ ಸೋಲಿನೊಂದಿಗೆ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತ್ತು. ಮತ್ತೊಂದು ಕಡೆ ಈಜಿಪ್ಟ್ ವಿರುದ್ಧದ ಪಂದ್ಯದಲ್ಲಿ ಕೊನೆಯಲ್ಲಿ 3 ಗೋಲುಗಳನ್ನು ಗಳಿಸುವ ಮೂಲಕ ಲಿಯೋನಲ್ ಮೆಸ್ಸಿ ತಂಡ ಅರ್ಜೇಂಟೀನಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದ ಈಜಿಪ್ಟ್ ವಿರುದ್ಧದ 16ರ ಘಟ್ಟದ ಪಂದ್ಯದಲ್ಲಿ ಅರ್ಜೆಂಟೀನಾ ಸೋಲುತ್ತದೆ ಎಂದು ಭಾವಿಸಲಾಗಿತ್ತು. ಮೊದಲಿಗೆ ಈಜಿಪ್ಟ್ 2 ಗೋಲುಗಳೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಆದರೆ 79ನೇ ನಿಮಿಷಕ್ಕೆ ಅರ್ಜೇಂಟೀನಾ ಪರ ಮೊದಲ ಗೋಲು ದಾಖಲಾಯಿತು.
ಈ ಪಂದ್ಯದಲ್ಲಿ ಈಜಿಪ್ಟ್ ಪರ ಯಾಸರ್ ಇಬ್ರಾಹಿಂ ಮತ್ತು ಮುಸ್ತಫಾ ಜಿಕೊ ತಲಾ ಒಂದು ಗೋಲು ಬಾರಿಸಿದರೇ ಅರ್ಜೆಂಟೀನಾ ಪರ ಕ್ರಿಸ್ಟಿಯನ್ ರೊಮೆರೊ ಮತ್ತು ಲಿಯೋನೆಲ್ ಮೆಸ್ಸಿ ಕೂಡ ತಲಾ 1 ಗೋಲು ಬಾರಿಸಿದ್ದು ಉಭಯ ತಂಡಗಳು ಸಮಬಲ ಸಾಧಿಸಿದ್ದವು. ಹೀಗಾಗಿ ಹೆಚ್ಚುವರಿ ಸಮಯ ನೀಡಲಾಯಿತು.
ಈಜಿಪ್ಟ್ ಪರ ಮೊದಲ ಗೋಲು 15 ನಿಮಿಷಕ್ಕೆ ಬಾರಿಸಿದರೇ ಎರಡನೇ ಗೋಲು 67ನೇ ನಿಮಿಷದಲ್ಲಿ ಬಂದಿತ್ತು. ಇನ್ನು ಈ ಪಂದ್ಯದಲ್ಲಿ ಅರ್ಜೇಂಟಿನಾ ಸೋಲುತ್ತದೆ ಎಂದು ಭಾವಿಸಲಾಗಿತ್ತು. ಆದರೆ 79 ನಿಮಿಷದಲ್ಲಿ ಕ್ರಿಸ್ಟಿಯನ್ ರೊಮೆರೊ ಮೊದಲ ಗೋಲು ಬಾರಿಸಿದರು. ಇದರ ಬೆನ್ನಲ್ಲೇ ಆಟ ಕೊನೆಯ ಹಂತದಲ್ಲಿ ಅಂದರೆ 83 ನಿಮಿಷಕ್ಕೆ ಲಿಯೋನೆಲ್ ಮೆಸ್ಸಿ ತಂಡದ ಪರವಾಗಿ ಎರಡನೇ ಗೋಲು ಬಾರಿಸಿದರು. ಅಂತಿಮವಾಗಿ 93ನೇ ನಿಮಿಷಕ್ಕೆ ಅರ್ಜೇಂಟೀನಾ ಪರ ಎಂಜೊ ಫೆರ್ನಾಂಡಿಸ್ ಮೂರನೇ ಗೋಲು ಬಾರಿಸಿ ಅರ್ಜೇಂಟೀನಾಗೆ ಗೆಲುವು ತಂದುಕೊಟ್ಟರು.