ಬರೊಬ್ಬರಿ 27 ಲಕ್ಷ ರೂ: FIFA World Cup 2026 Final ಟಿಕೆಟ್`ಗೆ ಭಾರಿ ಬೇಡಿಕೆ; ಕ್ರೀಡಾ ಇತಿಹಾಸದ ಅತಿ ದುಬಾರಿ ಪಂದ್ಯ

ಮೆಟ್‌ಲೈಫ್ ಸ್ಟೇಡಿಯಂನ ಸೆಕ್ಷನ್ 115Aಯಲ್ಲಿರುವ ಅತ್ಯಂತ ದುಬಾರಿ ಟಿಕೆಟ್ ಬೆಲೆ 28,479 ಡಾಲರ್ (ಸುಮಾರು 27 ಲಕ್ಷ) ತಲುಪಿದೆ. ಈ ಬೆಲೆ ಅಮೆರಿಕದ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.
FIFA World Cup 2026 Final
ಫಿಫಾ ವಿಶ್ವಕಪ್ ಫೈನಲ್ ಪಂದ್ಯ
Updated on

ನ್ಯೂಯಾರ್ಕ್: ಫುಟ್‌ಬಾಲ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಫಿಫಾ ವಿಶ್ವಕಪ್ 2026 ಫೈನಲ್ ಪಂದ್ಯವು ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಟಿಕೆಟ್‌ಗಳಿರುವ ಪಂದ್ಯವಾಗಿ ದಾಖಲೆ ಬರೆಯಲು ಸಜ್ಜಾಗಿದೆ.

ಅಮೆರಿಕದ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದ ಟಿಕೆಟ್ ಗೆ ಭಾರಿ ಬೇಡಿಕೆ ಎದುರಾಗಿದ್ದು, ಪಂದ್ಯದ ಟಿಕೆಟ್ ಗಳು ದಾಖಲೆ ಬೆಲೆಗೆ ಮಾರಾಟವಾಗುತ್ತಿದ್ದು, ಬೆಲೆ ಗಗನಕ್ಕೇರಿದೆ.

ಫೋರ್ಬ್ಸ್ ವರದಿ ಪ್ರಕಾರ, ಫೈನಲ್ ಪಂದ್ಯವನ್ನು ವೀಕ್ಷಿಸಲು ಕನಿಷ್ಠ ಪ್ರವೇಶ ಟಿಕೆಟ್‌ (Get-in Price) ಬೆಲೆ 6,943 ಡಾಲರ್ (ಸುಮಾರು 6 ಲಕ್ಷ) ಆಗಿದೆ.

ಆದರೆ ಟಿಕೆಟ್ ಮಾರಾಟ ವೇದಿಕೆ ಟಿಕ್‌ಪಿಕ್ (TickPick) ಮಾಹಿತಿ ಪ್ರಕಾರ, ಫೈನಲ್ ಟಿಕೆಟ್‌ನ ಸರಾಸರಿ ಖರೀದಿ ಬೆಲೆ 11,327 ಡಾಲರ್ (ಸುಮಾರು 9.8 ಲಕ್ಷ) ತಲುಪಿದ್ದು, ಇದು ಅಮೆರಿಕದಲ್ಲಿ ನಡೆದ ಯಾವುದೇ ಕ್ರೀಡಾಕೂಟಕ್ಕಿಂತಲೂ ಅತ್ಯಧಿಕ ಎನ್ನಲಾಗಿದೆ.

FIFA World Cup 2026 Final
FIFA World Cup final 2026: ಈ ಬಾರಿಯ ವಿಜೇತರಿಗೆ ಸಿಗಲಿದೆ ಅಮೆರಿಕ ರೀತಿಯ ಚಾಂಪಿಯನ್ ಶಿಪ್ ಉಂಗುರ!

ಒಂದು ಟಿಕೆಟ್ ಬೆಲೆ 27 ಲಕ್ಷ!

ಪ್ರಸ್ತುತ ಮೆಟ್‌ಲೈಫ್ ಸ್ಟೇಡಿಯಂನ ಸೆಕ್ಷನ್ 115Aಯಲ್ಲಿರುವ ಅತ್ಯಂತ ದುಬಾರಿ ಟಿಕೆಟ್ ಬೆಲೆ 28,479 ಡಾಲರ್ (ಸುಮಾರು 27 ಲಕ್ಷ) ತಲುಪಿದೆ. ಈ ಬೆಲೆ ಅಮೆರಿಕದ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.

ಇದಕ್ಕೂ ಮೊದಲು, 2024ರ ಸೂಪರ್ ಬೌಲ್ನಲ್ಲಿ ನಡೆದ ಸ್ಯಾನ್ ಫ್ರಾನ್ಸಿಸ್ಕೊ 49ರ್ಸ್ ಮತ್ತು ಕಾನ್ಸಾಸ್ ಸಿಟಿ ಚೀಫ್ಸ್ ನಡುವಿನ ಫೈನಲ್ ಪಂದ್ಯವು ಸರಾಸರಿ 9,411 ಡಾಲರ್ ಟಿಕೆಟ್ ಬೆಲೆಯೊಂದಿಗೆ ಅತಿ ದುಬಾರಿ ಕ್ರೀಡಾಕೂಟವಾಗಿತ್ತು. ಇದೀಗ ಫಿಫಾ ವಿಶ್ವಕಪ್ ಫೈನಲ್ ಆ ದಾಖಲೆಯನ್ನು ಹಿಂದಿಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com