ಯುವ ಲೇಖಕರಿಗೆ ಟೊಟೊ ಪುರಸ್ಕಾರ

Updated on: 

2014ನೇ ಸಾಲಿನ ಕನ್ನಡ ಟೊಟೊ ಪುರಸ್ಕಾರಕ್ಕಾಗಿ ಟಿಎಫ್‌ಎ (ಖ್ಟಿಡ್ಟಿ ಋ್ಡಟಿಜಡ ಝಿಜ ಆ್ಠಡಿಡ) ಸಂಸ್ಥೆಯು ಸೃಜನಶೀಲ ಯುವ ಬರಹಗಾರರಿಂದ ಪ್ರವೇಶಗಳನ್ನು ಆಹ್ವಾನಿಸಿದೆ. ಪುರಸ್ಕಾರಕ್ಕಾಗಿ ಬರಹಗಳನ್ನು ಕಳುಹಿಸುವವರು 18- 29 ವಯಸ್ಸಿನವರಾಗಿರಬೇಕು. ಜನವರಿ 1, 1984ರ ನಂತರ ಹುಟ್ಟಿದವರು ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶಗಳನ್ನು ಕಳಿಸಲು ಅರ್ಹರು. ಕಥೆ, ಕವಿತೆ ಮತ್ತು ನಾಟಕ ಈ ಮೂರರಲ್ಲಿ ಯಾವುದೇ ಪ್ರಕಾರದ ಕನ್ನಡ ರಚನೆಗಳನ್ನು ಕಳುಹಿಸಬಹುದು. ಪುರಸ್ಕಾರದ ಆಯ್ಕೆಯನ್ನು ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡಲಿದೆ. ಪ್ರವೇಶ ಕಳುಹಿಸಲು ಕೊನೆಯ ದಿನ: ಸೆಪ್ಟೆಂಬರ್ 15, 2013.
ಪ್ರಶಸ್ತಿಯ ಮೊತ್ತ: 30,000 ರು.
ವಿಳಾಸ: ಟೊಟೊ ಫಂಡ್ಸ್ ದಿ ಆರ್ಟ್ಸ್, ಎಚ್ 301, ಆದರ್ಶ ಗಾರ್ಡನ್ಸ್, 8ನೇ ಬ್ಲಾಕ್, 47ನೇ ಕ್ರಾಸ್, ಜಯನಗರ, ಬೆಂಗಳೂರು- 560 082.
ಟೊಟೊ ವಾರ್ಷಿಕ ಪ್ರಶಸ್ತಿಗಳನ್ನು ಛಾಯಾಚಿತ್ರ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ನೀಡಲಾಗುತ್ತದೆ. ಈ ಬಗ್ಗೆಢ ಹೆಚ್ಚಿನ ಮಾಹಿತಿಗೆ http://totofundsthearts.blogspot.com ಜಾಲತಾಣಕ್ಕೆ ಭೇಟಿ ನೀಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com