ನ್ಯಾನೋಕಥೆಗಳು

Updated on: 

ಮಠದ ಹೊರಗಿನ ದೊಡ್ಡ ಸಭಾಂಗಣದಲ್ಲಿ ಪವಾಡ ಪುರುಷ ಸ್ವಾಮೀಜಿ ತಮ್ಮ ಪ್ರವಚನದಲ್ಲಿ ಕೃಷ್ಣ ಲೀಲೆಗಳನ್ನು ಹೇಳುತ್ತಿದ್ದರು. ಒಳಗೆ ತೂಗುತ್ತಿದ್ದ ತೊಟ್ಟಿಲುಗಳು ಇವನ ಲೀಲೆಗಳನ್ನು ಹೇಳುತ್ತಿದ್ದವು.

ಕಳ್ಳ
ಬಸ್‌ಸ್ಟ್ಯಾಂಡ್‌ನ ಹೊರಗೆ "ಎಚ್ಚರಿಕೆ" ಎಂದು ಚಿಲ್ಲರೆ ಪಿಕ್ ಪಾಕೆಟ್ ಮಾಡುವವರ ಫೋಟೋ ಅಂಟಿಸಿದ್ದಾರೆ. ಒಳಗೆ ಕೋಟಿ ಕೋಟಿ ಹಗಲು ದರೋಡೆ ಮಾಡಿದ ಮಂತ್ರಿ ಹೊಸ ಯೂನಿಟ್ ಉದ್ಘಾಟನೆ ಮುಗಿಸಿ ಹಾರ ಹಾಕಿಸಿಕೊಳ್ಳುತ್ತಿದ್ದಾನೆ.

ಸನ್ಮಾನ
ದೊಡ್ಡ ಮನುಷ್ಯ ಟ್ರೇನ್‌ನಿಂದ ಇಳಿದ. ಬಂದ ಕೂಡಲೇ ಎಲ್ಲರೂ ಮಾಲೆ ಹಾಕಿ, ಹೂ ಗುಚ್ಛ ನೀಡಿ ಸ್ವಾಗತಿಸಿದರು. ಅವನು ಅವುಗಳನ್ನೆಲ್ಲ ಪಕ್ಕಕ್ಕೆ ಎಸೆದ. ಅಲ್ಲೇ ಕೂತಿದ್ದ ಬಡ ಮುದುಕ ಹೂವುಗಳ ವಾಸನೆಯಿಂದಲೇ ಹೊಟ್ಟೆ ತುಂಬಿಸಿಕೊಂಡ.

ಜನ ಇರಲಿಲ್ಲ
ದುಡ್ಡೇ ಜೀವನವೆಂದು ತಿಳಿದು ಪೈಸೆ ಪೈಸೆ ಒಟ್ಟು ಮಾಡಿ, ಸ್ನೇಹ ಸಂಬಂಧಗಳನ್ನೇ ಮರೆತ ವ್ಯಕ್ತಿ, ಮಾಡಿಟ್ಟಿದ್ದನ್ನು ಅನುಭವಿಸುವ ಸಮಯ ಬಂದಾಗ ಅನಾರೋಗ್ಯದಿಂದ ಅಸುನೀಗಿದ್ದ. ಚಟ್ಟಕ್ಕೆ ಹೆಗಲು ಕೊಡುವವರೇ ಇರಲಿಲ್ಲ.

ಸಂಪತ್ತು
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರ ಹೊರಗೆ ಬರೆದಿತ್ತು, "ನಿಮ್ಮ ಆರೋಗ್ಯವೇ ನಮಗೆ ಸಂಪತ್ತು" (ಯುವರ್ ಹೆಲ್ತ್ ಇಸ್ ಅವರ ವೆಲ್ತ್) ಎಂದು. ಒಳಗೆ ನೋಡಿದರೆ ಆರೋಗ್ಯದಿಂದ ಇದ್ದವನಿಗೆ ದಿನಕ್ಕೊಂದು ರೋಗ ಇದೆ ಎಂದು ಹೇಳಿ ನಲವತ್ತು ಸಾವಿರ ಬಿಲ್ ಮಾಡಿದ್ದರು. ಆ ಧ್ಯೇಯ ವಾಕ್ಯ ಅಕ್ಷರಶಃ ನಿಜವೆನಿಸಿತು.

ಪ್ರೀತಿ
ನಾಯಿಯನ್ನು ಮನುಷ್ಯರಂತೆ ತನ್ನದೇ ಹಾಸಿಗೆ ಮೇಲೆ ಮಲಗಿಸಿ ಸಾಕುವ ವ್ಯಕ್ತಿ, ತನ್ನನ್ನು ಮನುಷ್ಯನಾಗಿ ಮಾಡಿದ ಅಪ್ಪ ಅಮ್ಮನನ್ನು ಬೀದಿಗೆ ಹಾಕಿದ್ದ. <
ಪರೇಶ ಸರಾಫ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com