ಸದಾ ಕಾಡುವ ಪ್ರಶ್ನೆ
ನೀ ನನ್ನ ಕನಸು
ಹೌದು,
ಆದರೆ ನಾ ಕೂಡ
ನಿನ್ನ ಕನಸಾ?
ಪ್ರೀತಿ
ನನ್ನ ಮನದ
ಹಾಳೆಯಲ್ಲಿ
ನೀ ಬರೆದ
ಕವನ
ನೆನಪುಗಳು
ನೀ ದೂರ ಹೋದ ಮೇಲೆ
ಮನಸ್ಸೀಗ ಖಾಲಿ ಖಾಲಿ
ಅದಕ್ಕೇ ನೆನಪುಗಳು
ಬರುತ್ತಿವೆ ಒಂದಾದರ ಮೇಲೋಂದು ತೇಲಿ ತೇಲಿ.
ವಿರಹ
ನೀ ನನ್ನಿಂದ
ದೂರವಾಗಿದ್ದಕ್ಕೆ.
ನಾ ಅನುಭವಿಸುತ್ತಿರುವ
ಶಿಕ್ಷೆ.
-ಶ್ರವಣ್ ನಾರಾಯಣ್