ಗಂಡ: ನಾನು ಒಂದು ವೇಳೆ ತಪ್ಪಿಸಿಕೊಂಡರೆ ನೀನು ಏನು ಮಾಡುತ್ತೀಯಾ?
ಹೆಂಡತಿ: ಪೇಪರ್ನಲ್ಲಿ ಜಾಹೀರಾತು ನೀಡುತ್ತೇನೆ..
ಗಂಡ: ಏನೂಂತ?
ಹೆಂಡತಿ: ಗಂಡ ಕಳೆದು ಹೋಗಿದ್ದಾರೆ... ಇನ್ನೊಂದು ಗಂಡ ಬೇಕೂಂತಾ...
ಗಂಡ: ಅಲ್ವೇ... ಮನೆ ಕೆಲಸಕ್ಕೆ ಹೆಂಗಸರು ಬೇಡಾಂತ ಯಾಕೆ ಹಠ ಹಿಡೀತಿದ್ದೀಯ?
ಹೆಂಡತಿ: ನಿಮ್ಮ ಬುದ್ಧಿ ನನಗೆ ಗೊತ್ತಿಲ್ವಾ
ಗಂಡ: ನಾನೇನು ಮಾಡ್ದೆ ?
ಹೆಂಡತಿ: ನಾನು ಕೂಡಾ ಮನೆ ಕೆಲಸದವಳಾಗಿಯೇ ಇಲ್ಲಿಗೆ ಬಂದಿದ್ದು...ಅಷ್ಟು ನೆನಪಿರಲಿ ನಿಮ್ಗೆ...
ಹೆಂಡತಿ: ರೀ... ಬನ್ರೀ ಇಲ್ಲಿ...
ಗಂಡ: ಏನು ?
ಹೆಂಡತಿ: ಅಲ್ಲಾರೀ... ನಿಮಗೆ ರಾಣಿ ಅಂತ ಮೊದಲನೇ ಹೆಂಡತಿ ಇದ್ದ ವಿಷಯವನ್ನು ನನಗೆ ಯಾಕೆ ಹೇಳಿಲ್ಲ?
ಗಂಡ: ಮೊದಲೇ ಹೇಳಿಲ್ವೇನೆ ನಿನಗೆ... ನಿನ್ನನ್ನ ರಾಣಿ ಥರಾ ನೋಡ್ಕೋತೀನಿ ಅಂತಾ..
ಒಬ್ಬ ಹುಡುಗ ತನ್ನದೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗಿಗೆ ಐ ಲವ್ ಯೂ... ಅಂತಾನೆ.. ಆದರೆ ಹುಡುಗಿ ಸುಮ್ಮನಿರುತ್ತಾಳೆ... ಹುಡುಗ ಮತ್ತೆ.. ಐ ಲವ್ ಯು, ಈಗ ನಿನ್ನ ಸರದಿ.. ಈಗ ನೀನು ಹೇಳು..
ಹುಡುಗಿ: ಸುಮ್ಮನಿರು.. ಇಲ್ಲದಿದ್ದರೆ ಸೀದಾ ಪ್ರಿನ್ಸಿಪಾಲ್ ಸರ್ ಹತ್ರ ಹೋಗಿ ಹೇಳ್ತೀನಿ..
ಹುಡುಗ: ಪ್ರಿನ್ಸಿಪಾಲ್ ಗೆ ಹೇಳಬೇಡಮ್ಮಾ... ಅವರಿಗೆ ಈಗಾಗಲೇ ಮದುವೆ ಆಗಿದೆ.