ನ್ಯಾನೋಕಥೆಗಳು

Updated on: 
  1. ದಶಕಗಳಿಂದ ಜಗುಲಿಯ ಮೂಲೆಯಲ್ಲಿ ಜಡ್ಡು ಹಿಡಿದು ಮಲಗಿದ್ದರೂ ಕ್ಯಾರೆ ಎನ್ನದ ಮಗ, ಆಸ್ತಿಯನ್ನು ಅನಾಥಾಶ್ರಮಕ್ಕೆ ವಿಲ್ ಮಾಡಿದ್ದಾಳೆ ಎನ್ನುವ ಸುದ್ದಿ ತಿಳಿದು ಮನೆಗೆ ಓಡೋಡಿ ಬಂದು ಕೊನೆಯುಸಿರು ಎಳೆಯುತ್ತಿದ್ದ ತಾಯಿಯನ್ನು ಬದುಕಿಸಿಕೊಳ್ಳಲು ಸಂಜೀವಿನಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಆತನ ಹೆಂಡತಿ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿದ್ದಳು.
  2. ಲಕ್ಷಾಂತರ ಮರಗಳನ್ನು ನೆಟ್ಟು ಬೆಳೆಸಿ ಪರಿಸರ ರಕ್ಷಣೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಪರಿಸರವಾದಿಯೊಬ್ಬರು ನಿಧನರಾದ ಮರುದಿನವೇ ಅದೇ ಗ್ರಾಮದ 5 ಎಕರೆ ವ್ಯಾಪ್ತಿಯಲ್ಲಿದ್ದ ಮರಗಳನ್ನು ಕಡಿದು ಶ್ರೀಯುತರ ಬೃಹತ್ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿದ ಸರ್ಕಾರದ ತೀರ್ಮಾನಕ್ಕೆ ಜನ ಚಪ್ಪಾಳೆ ತಟ್ಟದೆ ವಿಧಿಯಿರಲಿಲ್ಲ.
  3. 40 ರಿಂದ 50 ವಸಂತಗಳು ಕಳೆದರೂ ಯುವ ಮುಖಂಡರಾಗಿಯೇ ಇರುವ ಕೆಲವು ರಾಜಕಾರಣಿಗಳು ಯುವಕರ ಪ್ರತಿನಿಧಿಗಳಾಗಿ ಮಂತ್ರಿಗಿರಿಯಲ್ಲಿ ರಾರಾಜಿಸುತ್ತಿರುವಾಗಲೇ, ನಿಜವಾದ ಒಂದಷ್ಟು ಯುವಕರು ಗೂಡಂಗಂಡಿಗಳ ಹಿಂದೆ ಕುಳಿತು ಸಿಗರೇಟನ್ನು ಸುಡುತ್ತಿದ್ದರೆ. ಇನ್ನಷ್ಟು ಯುವಕರು ಫೇಸ್‌ಬುಕ್‌ನಲ್ಲಿ ತಮ್ಮದೇ ಫೇಸ್‌ನ ಲೈಕ್/ ಕಾಮೆಂಟ್‌ಗಳನ್ನು ಕೌಂಟ್ ಮಾಡುತ್ತಿದ್ದಾರೆ.
  4. ಪ್ರಕೃತಿ ವಿಕೋಪದಿಂದ ಬದುಕುಳಿದ ನಿರಾಶ್ರಿತ ಶಿಬಿರಕ್ಕೆ ಭೇಟಿ ಕೊಟ್ಟ ಸ್ವಾಮೀಜಿಯೊಬ್ಬರು ಹಸಿವಿನ ಬಗ್ಗೆ ಪ್ರವಚನ ನೀಡುತ್ತಿರುವ ಸಮಯಕ್ಕೆ ಸರಿಯಾಗಿ ಬಂದ ಸೇನೆಯ ಹೆಲಿಕಾಪ್ಟರ್‌ನಿಂದ ಆಹಾರ ಪದಾರ್ಥಗಳು ಬಿದ್ದವು.  ಆಹಾರದ ಪ್ಯಾಕೆಟ್‌ಗಳನ್ನು ಆಯ್ದುಕೊಳ್ಳಲು ಓಡಿದ ನಿರಾಶ್ರಿತರನ್ನು ಕಂಡ ಸ್ವಾಮೀಜಿಗೆ ಹೆಲಿಕಾಪ್ಟರ್‌ನ ಕೆಳಗೆ ಮತ್ತೊಮ್ಮೆ ಜ್ಞಾನೋದಯವಾಯಿತು.
- ಹರೀಶ ಹೆಚ್.ಡಿ, ತುಮಕೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com