ಮಕರಂದ/ದೋಣಿ

ನ್ಯಾನೋಕಥೆಗಳು

Published On :

1.     ಪ್ರೇಮಲೋಕದ  ಪಾಲಿನ ಅತ್ಯಂತ ಪವಿತ್ರ ಮಾತೆಂದರೆ, ನೀನಿಲ್ಲದೇ ಬದುಕುವುದಿಲ್ಲ ಅನ್ನುವುದಲ್ಲ. ಜೀವ ಬಿಡ್ತೀನಿ ಅನ್ನುವುದೂ ಅಲ್ಲ. ಬದಲಾಗಿ ನೀನೇ ಹೇಳು ನೀನೇ ಹೇಳು ಅನ್ನುವುದು.
2.    ಅವನಿಗೆ ಒಳ್ಳೆಯದಾಗಲಿ ಅಂತ ಪೂಜೆ ಮಾಡಿಸಲು ಸರತಿ ಸಾಲಿನಲ್ಲಿ ಅವಳು ನಿಂತಿದ್ದಳು. ಮಧ್ಯಾಹ್ನವಾದರೂ ಅವಳ ಸರದಿ ಬರಲಿಲ್ಲ. ಅವನ ನೆನಪಾಗಿ ಮನೆಗೆ ಹೋದವಳ ಮೇಲೆ ದೇವರು ಮುನಿಸಿಕೊಂಡ. ಆದರೆ ಅವನು ಮುದ್ದಿಸಿದ.
3.    ಕೇವಲ ಮಾರು ದೂರವಿದ್ದ ಹಾದಿಯನ್ನ ಒಬ್ಬಳೇ ದಾಟಲಾಗದೇ ಕುಸಿದು ಕುಳಿತ ಅವಳ ಅಸಹಾಯಕತೆಗೆ ನಗಬಾರದು. ಬದಲಾಗಿ ಅವಳ ಅಪ್ಪಟ ಪ್ರೀತಿಗೆ ಚಪ್ಪಾಳೆ ತಟ್ಟಬೇಕಂತೆ.
4.    ದೇವರ ಮುಂದೆ ದೀಪಗಳನ್ನ ಹಚ್ಚಿ ತನ್ನ ಕನಸುಗಳೇನೆಂದು ಹೇಳಿಕೊಂಡ ಅವಳ ಪ್ರೀತಿಗೆ ದೇವರೇ ಲೆಕ್ಕ ತಪ್ಪಿದ್ದು ಸುಳ್ಳಲ್ಲ.
5.    ಪ್ರೀತಿಸಿದ್ದನ್ನ ಖುಷಿಯಿಂದ ಪುಟಗಟ್ಟಲೇ ಬರೆದುಕೊಂಡಳು. ದ್ವೇಷಿಸಿದ್ದನ್ನ ಬಿಕ್ಕಳಿಸುತ್ತ ಒಂದು ಸಾಲು ಬರೆಯಲಾಗದೆ ಖಾಲಿಯಾದಳು.
6.    ಗೆಳೆಯ ಗೆಳತಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಅಂತ ಕೇಳಿದ. ಒಂದಿಷ್ಟು ಚಳಿಗಾಲ ಪ್ಲೀಸ್ ಅಂದು ಇಬ್ಬರೂ ನಕ್ಕರು.
7.    ಇದು ನಿನಗೆ ನಾನು ಬರೆಯುತ್ತಿರುವ ಕೊನೆಯ ಪತ್ರ ಅನ್ನುವ ಪತ್ರವೊಂದು ಅವಳಿಗೆ ಸಿಕ್ಕಿದ್ದು ಒಂದರ ಹಿಂದೊಂದು ಜೋಡಿಸಿಟ್ಟ ಅವನ 500 ಪ್ರೇಮ ಪತ್ರಗಳ ಅಡಿಯಲ್ಲಂತೆ.

- ನವಿಲುಗರಿ ಸೋಮು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.