ಸಂತೋಷ ಮತ್ತು ದುಃಖ ಎರಡೂ ಒಂದೇ ಬೆಲೆಗೆ ಮಾರಾಟಕ್ಕಿವೆ. ಅದೇನಂತೀರಾ? ಬಿಯರ್ ಮತ್ತು ಪೆಟ್ರೋಲ್ ಎರಡೂ ಹೆಚ್ಚೂಕಡಿಮೆ 80 ರು. ಆಸುಪಾಸಿನಲ್ಲೇ ಸಿಗುತ್ತಿವೆ.
=
ವರದಕ್ಷಿಣೆ ಪಡೆದ ಅಳಿಯ ಮಾವನಿಗೆ ಬರೆದ ಪತ್ರದ ಒಕ್ಕಣಿಕೆ: ಪ್ರೀತಿಯ ಮಾವಯ್ಯ, ನಾನು ವರದಕ್ಷಿಣೆಯಾಗಿ ಕಾರನ್ನು ಪಡೆದು ಭಾರೀ ತಪ್ಪು ಮಾಡಿದೆ. ದಯವಿಟ್ಟು ಕಾರನ್ನು ಅಥವಾ ನಿಮ್ಮ ಮಗಳು ಅರ್ಥಾತ್ ನನ್ನ ಹೆಂಡತಿಯನ್ನು ವಾಪಸ್ ಕರೆದುಕೊಂಡು ಹೋಗಿ, ಇಬ್ಬರನ್ನೂ ನಿಭಾಯಿಸುವುದು ನನ್ನಿಂದ ಸಾಧ್ಯವಾಗುತ್ತಿಲ್ಲ.
=
ಟ್ರಾಫಿಕ್ ತೊಂದರೆ ನಿವಾರಿಸಲು ಇರುವುದು ಒಂದೇ ದಾರಿ. ಪೆಟ್ರೋಲ್ ಬೆಲೆ ಏರಿಕೆ!
=
ಇನ್ನು ಮುಂದೆ ಕುಡಿದು ವಾಹನ ಚಲಾಯಿಸುವವರ ಸಂಖ್ಯೆ ಮತ್ತು ಅಪರಾಧ ಕಡಿಮೆಯಾಗಲಿದೆ. ಯಾಕಂತೀರಾ? ಈ ದುಬಾರಿ ದಿನದಲ್ಲಿ ಪೆಟ್ರೋಲ್ ಮತ್ತು ಆಲ್ಕೋಹಾಲ್ ಎರಡನ್ನು ಒಟ್ಟಿಗೆ ಕೊಳ್ಳಲು ಸಾಧ್ಯವೆ?