

ಮಾತೊಂದೇ ಗೊತ್ತಿರುವ ಈ ಜಗತ್ತಿನಲ್ಲಿ ಕೇಳುಗರು ಕಮ್ಮಿ. 'ಒಳ್ಳೆಯ ಕೇಳುಗ ಒಳ್ಳೆಯ ವ್ಯಕ್ತಿಯಾಗಲು ಸಾಧ್ಯ' ಎಂಬ ಹಿರಿಯರ ಮಾತು ಈಗ ಚಾಲ್ತಿಯಲ್ಲಿಲ್ಲ. ಆದರೆ, ತುಮಕೂರಿನ ಅಜ್ಜಿ ಇಂದಿರಾ ರಾಜ್ ಇದಕ್ಕೆ ಅಪವಾದ. 50 ವರ್ಷದಿಂದ ರೇಡಿಯೋ ಕಾರ್ಯಕ್ರಮಗಳನ್ನು ತಪ್ಪದೇ ಕೇಳುತ್ತಾ ಬಂದಿದ್ದಾರೆ. ಕೇಳೋದು ಅಷ್ಟೇ ಅಲ್ಲ, ಈ ಐವತ್ತು ವರ್ಷದಲ್ಲಿ ಮೂಡಿಬಂದ ಎಲ್ಲ ಕಾರ್ಯಕ್ರಮಗಳನ್ನೂ ಕಂಠಪಾಠದಂತೆ ಹೇಳ್ತಾರೆ. ಅವರಿಗೆ ರೇಡಿಯೋ ಸಂಗಾತಿಯಂತೆ.
ಮೊನ್ನೆ ಬೆಂಗಳೂರಿನಲ್ಲಿ ಆಕಾಶವಾಣಿ, ಸಾಹಿತ್ಯ ಸಮ್ಮೇಳನ ಆಯೋಜಿಸಿತ್ತು. ಅಲ್ಲಿಗೆ ಈ ಅಜ್ಜಿ ಬಂದಿದ್ದರು. ಇವರ ಈ ರೇಡಿಯೋ ಪ್ರೀತಿ ಕಂಡ ಆಕಾಶವಾಣಿ ಅಧಿಕಾರಿಗಳು, ಅಜ್ಜಿಗೆ ಸನ್ಮಾನ ಮಾಡಿದರು. ಏನೇ ಅನ್ನಿ, ಕೇಳುಗರಿರಬೇಕು ಈ ಜಗದಲ್ಲಿ...