ಗುಂಡ: ನಿಮ್ಮ ತಂದೆ ಈಗ ಹೇಗಿದ್ದಾರೆ ತಿಮ್ಮಾ?
ತಿಮ್ಮ: ಏನು ಹೇಳೋದು ಡಾಕ್ಟ್ರೆ, ಕಾಯಿಲೆ ಇನ್ನೂ ಹಾಗೆಯೇ ಇದೆ.
ಗುಂಡ: ಕಾಯಿಲೆ ಇದ್ರೇನು. ಮಾತ್ರೆ ಗೀತ್ರೆ ನುಂಗುತ್ತ ಇದ್ದರಾಯಿತು.
ತಿಮ್ಮ: ಅಯ್ಯೋ ಎಲ್ಲಾ ಆಯ್ತು ಡಾಕ್ಟ್ರೆ, ಎಷ್ಟೇ ಮಾತ್ರೆ ನುಂಗಿದ್ರೂ ಅವರು ಗುಣವಾಗ್ತಿಲ್ಲ. ಅವರ ಅವಸ್ಥೇನ ನನ್ನಿಂದ ನೋಡೋಕಾಗ್ತಿಲ್ಲ. ಒಂದೊಂದು ಬಾರಿ ಅನಿಸುತ್ತೆ. ಇಷ್ಟೊಂದು ಕಷ್ಟಪಡುವ ಬದಲು ಹೋಗಿಬಿಟ್ರೆ ಒಳ್ಳೇದು ಅಂತ.
ಗುಂಡ: ಹಾಗಿದ್ರೆ ಕರ್ಕೊಂಡು ಬಂದ್ಬಿಡು ನನ್ನ ಬಳಿ!
---
ತಿಮ್ಮ: ನಿಮ್ಮ ಸುಖ ದಾಂಪತ್ಯ ಜೀವನದ ಗುಟ್ಟೇನು?
ಗುಂಡ: ತಿಂಗಳಿಗೆ ಎರಡು ಸಲ ನಾವು ರಜೆಯಲ್ಲಿ ತೆರಳುತ್ತೇವೆ. ಮೊದಲ 15 ದಿನ ನಾನು ರಜೆಯಲ್ಲಿ ಪ್ರವಾಸಕ್ಕೆ ತೆರಳಿದರೆ, ಉಳಿದ 15 ದಿನ ಅವಳು ರಜೆಯಲ್ಲಿ ತೆರಳುತ್ತಾಳೆ.
---
ಗುಂಡ: ಲೇ ತಿಮ್ಮ... ಪೆಟ್ರೋಲ್ ಮತ್ತು ಯೌವನಕ್ಕೆ ಇರುವ ವ್ಯತ್ಯಾಸವೇನು?
ತಿಮ್ಮ: ದಿನ ಹೋದಂತೆ... ಪೆಟ್ರೋಲ್ ಬೆಲೆ ಏರುತ್ತೆ...
ಗುಂಡ: ಮತ್ತೆ ಯೌವನದ್ದು?
ತಿಮ್ಮ: ದಿನ ಹೋದಂತೆ... ಬೆಲೆ ಇಳಿಯುತ್ತೆ.
---
ಹುಡುಗ: ಐ ಲವ್ ಯು, ಈಗ ನಿನ್ನ ಸರದಿ.. ಈಗ ನೀನು ಹೇಳು..
ಹುಡುಗಿ: ಸುಮ್ಮನಿರು.. ಇಲ್ಲದಿದ್ದರೆ ಸೀದಾ ಪ್ರ್ರಿನ್ಸಿಪಾಲ್ ಸರ್ ಹತ್ರ ಹೋಗಿ ಹೇಳ್ತೀನಿ...
ಹುಡುಗ: ಪ್ರಿನ್ಸಿಪಾಲ್ ಗೆ ಹೇಳ ಬೇಡಮ್ಮಾ... ಅವರಿಗೆ ಈಗಾಗಲೇ ಮದುವೆ ಆಗಿದೆ..