ಜ್ವಾಲೆ

Updated on: 

ನೀಲಧ್ವಜ, ಮಾಹಿಷ್ಮತೀ ನಗರದ ರಾಜ. ಅವರ ಹೆಂಡತಿಯೇ ಜ್ವಾಲೆ. ಅಗ್ನಿ ಇವರ ಅಳಿಯ. ಧರ್ಮರಾಜನ ಯಜ್ಞಾಶ್ವವನ್ನು ಕಟ್ಟಿ, ಅರ್ಜುನನೊಡನೆ, ಅಗ್ನಿಯ ಸಹಾಯದಿಂದ ಯುದ್ಧಮಾಡುತ್ತಾನೆ ಈ ನೀಲಧ್ವಜ. ಅಗ್ನಿಯ ಆರ್ಭಟಕ್ಕೆ ಅರ್ಜುನನ ಸೇನೆ ತತ್ತರಿಸುತ್ತದೆ. ಆಗ ಅರ್ಜುನನು ಅಗ್ನಿಯನ್ನು ಪ್ರಾರ್ಥಿಸಿ ಆತನನ್ನು ಸಂತಷ್ಟಗೊಳಿಸಲು ಅಗ್ನಿಯು ಯುದ್ಧದಿಂದ ವಿಮುಖನಾಗುತ್ತಾನೆ. ಆಗ ನೀಲಧ್ವಜನು ಯುದ್ಧದಲ್ಲಿ ಸೋತು, ಅರ್ಜುನನೊಡನೆ, ಯಜ್ಞಾಶ್ವದ ಬೆಂಗಾವಲಾಗಿ ಹೊರಡಲು ನಿರ್ಧರಿಸುತ್ತಾನೆ. ಇದರಿಂದ ಕೆರಳಿದ ಜ್ವಾಲೆ, ಅರ್ಜುನನ ಮೇಲೆ ಸೇಡು ತೀರಿಸಿಕೊಳ್ಳಲು ಪಣ ತೊಡುತ್ತಾಳೆ. ಮಾಹಿಷ್ಮತೀ ನಗರವನ್ನು ಬಿಟ್ಟು ಗಂಗಾ ನದಿಯ ತಟಕ್ಕೆ ಬಂದು, ಅಂಬಿಗರೊಡನೆ, ಗಂಗೆಯ ನೀರು ತನಗೆ ಸೋಂಕದಂತೆ ನದಿ ದಾಟಿಸುವಂತೆ ಕೇಳುತ್ತಾಳೆ. ಮಕ್ಕಳಿಲ್ಲದ ಗಂಗೆ ಈಗ ಪಾವನೆಯಲ್ಲ ಎಂದು ಹೇಳುತ್ತಾಳೆ. ಇದರಿಂದ ಅಚ್ಚರಿಗೊಂಡ ಗಂಗಾದೇವಿ ಪ್ರತ್ಯಕ್ಷಳಾದಾಗ, ಅರ್ಜುನನು ಮೋಸದಿಂದ ನಿನ್ನ ಪುತ್ರನಾದ ಭೀಷ್ಮನನ್ನು ಕೊಂದದ್ದರಿಂದ ನೀನು ಪುತ್ರಹೀನಳಾದೆ ಎಂದು ಗಂಗೆಯ ಮನಸ್ಸನ್ನು ಘಾಸಿಗೊಳಿಸುತ್ತಾಳೆ. ಕೋಪಾನಿಷ್ಟಳಾದ ಗಂಗೆ, ಅರ್ಜುನನಿಗೆ ಅವನ ಮಗನಿಂದಲೇ ಸಾವು ಬರಲಿ ಎಂದು ಶಪಿಸಿ ಅಂತರ್ದಾನಳಾಗುತ್ತಾಳೆ. ಆಗ ಜ್ವಾಲೆ ಗಂಗಾತಟದಲ್ಲಿಯೇ ಅಗ್ನಿ ಪ್ರವೇಶ ಮಾಡಿ ಬಬ್ರುವಾಹನ ಬತ್ತಳಿಕೆಯಲ್ಲಿ ಬಾಣವಾಗಿ ಸೇರುತ್ತಾಳೆ. ಮುಂದೆ ಈ ಬಾಣದಿಂದಲೇ ಬಬ್ರುವಾಹನನು ಅರ್ಜುನನ ಶಿರವನ್ನು ಕತ್ತರಿಸುತ್ತಾನೆ. ಕೃಷ್ಣನ ಸಹಾಯದಿಂದ, ಬಬ್ರುವಾಹನನಿಂದಲೇ ಪುನಃ ಅರ್ಜುನ ಬದುಕುತ್ತಾನೆ.

- ಎನ್.ಆರ್. ಹೆಬ್ಬಾರ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com