ಹನಿ ಹನಿ

Updated on: 

ಅವಳ ಖಾಸಗಿ
ಬದುಕಿನ ತುಂಬಾ
ಇವನ ನೆನಪಿನ ನೆರಳು!
=
ಆಷಾಢದ ಇಳಿ ಸಂಜೆಯ
ದಿನ.
ಅವಳ ತಬ್ಬಿ ತುಟಿ
ಚುಂಬಿಸಿದ ಕ್ಷಣ,
ತಂಗಾಳಿಯೂ
ಉಸಿರುಗಟ್ಟಿ ಸತ್ತಿತ್ತು
ನಮ್ಮ ನಡುವೆ...!
=
ಸತ್ಯವೊಂದು
ಉದ್ದಕ್ಕೆ ಮಲಗಿದೆ
ಸುಳ್ಳಿನ ಕಾಲ ಬುಡದಲ್ಲೇ..!!
=
ಮಾತಿಗಿಂತಲೂ
ಮೌನ ಹೆಚ್ಚು ಪ್ರಬಲ!
=
ಅವಳ ನೆನಪುಗಳಿಗೆ
ಬೀಳ್ಕೊಡುಗೆ
ಸಮಾರಂಭವ ಮಾಡಲು
ನಿರ್ಧರಿಸಿರುವೆ!
ದಿನಾಂಕವಿನ್ನೂ ನಿಗದಿಯಾಗಿಲ್ಲ!
=
ನನ್ನನ್ನೇ ನಾನು
ಹರಾಜಿಗಿಟ್ಟು-
ಕೊಳ್ಳುವೆ
ನಿನ್ನ ನೆನಪುಗಳಿಂದ
ಮುಕ್ತಿ ಹೊಂದಲು!
=
ಗಾಂಧಿಯನ್ನರಸಿ
ಹೊರಟಿದ್ದೆ...
ಹೆಜ್ಜೆಗೊಬ್ಬ ಗೋಡ್ಸೆ
ಎದುರಾಗುತ್ತಿದ್ದ!
=
ಕಣ್ಣು ಮುಚ್ಚಿದೆ
ನಿನ್ನ ಕನಸು
ಕಣ್ಣು ಬಿಚ್ಚಿತು
=
ಅಪ್ಪನ ಪ್ರೀತಿ ಅರ್ಥವಾಗೋದು,
ನಾವು ಅಪ್ಪನಾದಾಗ.
=
ಜೀವನದಲ್ಲಿ ಯಾರೂ
ಪರಮ ಸುಖಿಗಳಲ್ಲ

- ನವೀನ್, ಮಧುಗಿರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com