ಕನಸು ಹೊತ್ತ ಮನಸು
ಭಾರವಾಗಿದೆ
ಮತ್ತೊಮ್ಮೆ ನಿರೀಕ್ಷೆ
ನೀ ಒಂಟಿ ಎಂದು ಎಚ್ಚರಿಸಿದೆ
=
ಬೊಚ್ಚು ಬಾಯಿಯ ನಗೆ
ಸುಕ್ಕುಗಟ್ಟಿರುವ ಚರ್ಮವ
ನವೀಕರಿಸುತ್ತಿದೆ
ನವೆದ ಗುರುತು ಸಿಗದ ಹಾಗೆ
=
ಕಳೆಗುಂದಿದ ಮುಖ
ಹೊಳೆಯುತ್ತಿದೆ
ಹಳೆಯ ನೆನಪುಗಳ ಕೆದಕಿ
ಗುಂಗುರು ಕೂದಲ ಎಳೆಯ
ಸುರುಳಿಯೊಂದಿಗೆ
=
ಕೆನ್ನೆಗೆ
ಆಸರೆಯಾಗುತ್ತಿರುವ ಕೈ
ಅಚ್ಚರಿಯ ಮೆಚ್ಚುಗೆ
ಸೂಚಿಸುತ್ತಿದೆ
=
ಕಲ್ಲಾದ ಮನದ ಮುಂದೆ
ಭಾವುಕತೆಯ ನರ್ತನ
=
ಎಲ್ಲವನ್ನೂ ಕಳಚಿ ಎಸೆದರೂ
ಸೆರಗ ತುದಿಯಲ್ಲಿ
ಒಲವು
ಸಿಲುಕಿಕೊಂಡಿದೆ
- ಕಾವೇರಿ ಎಸ್.ಎಸ್.