ನ್ಯಾನೋ ಕಥೆಗಳು

Updated on: 

ಅತಿ ಹೆಚ್ಚು ಕಳ್ಳತನವಾದ ಸ್ಥಳಗಳನ್ನೆಲ್ಲ ಪೊಲೀಸರು ಹುಡುಕುತ್ತಿದ್ದರು. ತುಂಟ ಗೆಳೆಯನೊಬ್ಬ ತನ್ನ ಗೆಳತಿಯ ತುಟಿಗಳಿಗೆ ಕಾವಲು ನಿಂತ.
=

ನಾಲ್ಕು ಹೆಜ್ಜೆಗಳೂ ಒಟ್ಟಿಗೇ ಹೋಗಬೇಕು ಅಂತ ಎರಡು ಹೆಜ್ಜೆಗಳು ಬಯಸಿದ್ದವು. ಈ ಮಾತಿಗೆ ಎರಡು ಹೆಜ್ಜೆಗಳು ಒಪ್ಪಲಿಲ್ಲ. ಕೊನೆಗೆ ನಾಲ್ಕೂ ಹಜ್ಜೆಗಳು ಅನಾಥವಾದವಂತೆ.
=
ಒಂದೂರಲ್ಲಿ ಒಂದು ಹುಡುಗನಿದ್ದ. ಮದುವೆಯಾದ ಒಂದು ತಿಂಗಳು ಹನಿಮೂನ್ ಮುಗಿಸಿಕೊಂಡು ಬಂದ. ಅದೇ ಊರಿನಲ್ಲಿ ಒಂದು ಮುದ್ದಾದ ಹುಡುಗಿ ಆ ಹುಡುಗಿಯ ಆತ್ಮಕ್ಕೂ ಒಂದು ತಿಂಗಳಾಗಿತ್ತು

=
ಅವನು ಡಿವೋರ್ಸ್ ತಗೋತೀನಿ ಅಂತ ತಮಾಷೆಗೆ ಅಂದ. ಇವಳು ದೇವರ ಮುಂದೆ ಹಣತೆ ಹಚ್ಚಿಟ್ಟು ನಿಜಕ್ಕೂ ಅತ್ತಿದ್ದಳು ಅನ್ನುವುದಕ್ಕೆ ಸಾಕ್ಷಿಯಾಗಿ ಹಣತೆ ಆರಿತ್ತು. ಅಲ್ಲಿ ಅವಳ ಕಣ್ಣೀರಿತ್ತು.
=

ಹುಡುಗಿಯೊಬ್ಬಳು ಯಾರನ್ನೋ ಮದುವೆಯಾಗಿ ಹೊಸ ಬದುಕಿನ ಹೊಸ್ತಿಲೊಳಗೆ ಒಂದು ಹೆಜ್ಜೆ ಇಡುತ್ತಿರುವಾಗಲೇ ಅದೇ ಊರಿನ ಮುಗ್ಧ ಹುಡುಗನೊಬ್ಬ ಬದುಕಿನಿಂದಾಚೆ ಹೆಜ್ಜೆಯಿಟ್ಟು ತುಂಬ ದಿನಗಳಾಗಿದ್ದವು.
=
ಪ್ರೇಮಿಗಳ ಎದೆಗಳೊಳಗೆ ಕಾಮನೆಗಳು, ಬಯಕೆಗಳು, ಕನಸುಗಳು, ಹಲವಾರು ತುಡಿತ, ಕಣ್ಣೀರು, ಸುಖ ಸಂತೋಷಗಳು ತುಂಬಿಕೊಳ್ಳುವುದರ ಜೊತೆಗೆ ಮಗುವೊಂದು ಮಲಗಿಕೊಳ್ಳಬೇಕಂತೆ.
=

ಅವನ ನೆನಪಿಗೊಂದರಂತೆ ಇವಳು ಹಚ್ಚಿಟ್ಟಿದ್ದ ದೀಪಗಳ ಸಾಲುಗಳನ್ನು ನೋಡಿ ಅಸಂಖ್ಯಾತ ನಕ್ಷತ್ರಗಳು ಸೋಲೊಪ್ಪಿಕೊಂಡು ಮರೆಯಾದವು.
=
ಹುಡುಗಿ ಯಾವುದೋ ಧ್ಯಾನದಲ್ಲೋ ಇನ್ಯಾರದೋ ನೆನಪಿನಲ್ಲೋ ಅರಳಿಕಟ್ಟೆಗೆ ಮೂರು ಸುತ್ತು ಹಾಕುತ್ತಿದ್ದಳು. ಅರಳಿಕಟ್ಟೆಯ ಮುಂದೆ ಚಪ್ಪಲಿ ಹೊಲಿಯುತ್ತ ಕುಳಿತಿದ್ದ ಅವನು ಅವಳನ್ನು ಸುತ್ತಿದ್ದಕ್ಕೆ ಲೆಕ್ಕವಿನ್ನೂ ಸಿಕ್ಕಿಲ್ಲ.

-  ನವಿಲುಗರಿ ಸೋಮು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com