ಎಂಥ ದುಃಸ್ವಪ್ನ!
ನನ್ನೆದೆಯ ಮೇಲೆ
ಮುಖವಿಟ್ಟು
ಅವನಿಗಾಗಿ ಅತ್ತಳು
=
ಲೇಖನಿಯ ಮೊನೆ
ಚುಚ್ಚಿದೆಯೆಂದು
ಕಾಗದ ದೂರುವುದಿಲ್ಲ
ಮಣ್ಣ ಹೊಕ್ಕ ಬೀಜಕ್ಕೆ
ದಾಂಪತ್ಯದ ಸವಿ
ಈಗವಳಿಗೆ ಚೊಚ್ಚಲ
ಹೆರಿಗೆ.
=
ಅವಳ ಕಣ್ಣ ಕಾಂತಿ
ಕದಿಯಬಾರದೆಂದು
ರೆಪ್ಪೆಗಳ ಕಾವಲು
ನಿರಂತರ
=
ಎಂಥ ಚೆಲುವು
ಆ ಹೂವಿಗೆ!
ದುಂಬಿಗಳಲ್ಲಿ
ಅದರದೇ ಗುಣಗಾನ
=
ಆತ ಸೋಲುತ್ತೇನೆಂದುಕೊಂಡ
ಸೋಲು ಹೆದರಲಿಲ್ಲ.
ಗೆಲುವು ತಾನೇ ಅಪ್ಪಿಕೊಂಡಿತು.
=
ಗೆದ್ದೆನೆಂಬ ಬಿಗುಮಾನವೇಕೆ?
ಸೋತವನ ಶೋಕದಲ್ಲಿ
ನಿನ್ನ ಪಾಲೂ ಇದೆ.
=
ಹರಿವ ನದಿಗೂ ಗೊತ್ತು
ವೇಳೆ ನಿಲ್ಲುವುದಿಲ್ಲ.
ಹಾಗಾಗಿ ನಾನಾದರೂ
ಯಾಕೆ ನಿಲ್ಲಬೇಕೆಂದು.
- ಶಿ.ಕಾ. ಬಡಿಗೇರ