ರಸ್ತೆಯಲ್ಲಿ ಇಬ್ಬರು ಗಂಡಸರು ಹೊಡೆದಾಡುತ್ತಿದ್ದರು. ಒಬ್ಬ ಬಾಲಕ ಶಾಲೆಗೆ ಹೋಗುವುದನ್ನು ಬಿಟ್ಟು ಅದನ್ನೇ ನೋಡುತ್ತಾ ನಿಂತಿದ್ದ. ಅದೇ ದಾರಿಯಲ್ಲಿ ಶಾಲೆಗೆ ಹೊರಟ ಮೇಷ್ಟ್ರಿಗೆ ಶಾಲೆಗೆ ಹೋಗದೆ ಜಗಳ ನೋಡುತ್ತಿದ್ದ ಹುಡುಗನ ನೋಡಿ ರೇಗಿತು. ಆ ಹುಡುಗನ ಕೆನ್ನೆಗೆ ಛಟೀರನೆ ಬಾರಿಸಿ 'ಕತ್ತೆ, ಶಾಲೆಗೆ ಹೋಗದೆ ಇಲ್ಲೇನ್ ಮಾಡ್ತಿದ್ದೀಯ? ಕರೀ ನಿಮ್ ಅಪ್ಪನ್ನಾ, ಗ್ರಹಚಾರ ಬಿಡಿಸ್ತೀನಿ ನಿಂದು...' ಅಂದರು. ಹುಡುಗ, 'ನಿಮ್ದೊಳ್ಳೆ ಕತೆ ಮೇಷ್ಟ್ರೇ, ನಾನು ಇವರ ಮಗನಲ್ಲ ಅಂತ ಇವರಿಬ್ಬರೂ ಹೊಡೆದಾಡ್ತಿದ್ದಾರೆ. ಇನ್ನೆಲ್ಲಿ ಅಪ್ಪನ್ನಾ ಕರೆಯೋದು...?'
= ಮಧು ಮಾಲ್ವೆ, ಸಾಗರ