ಬೈಟುಕಾಫಿ

'ಹವೇಲಿ'ಯ ಮರುಸೃಷ್ಟಿ (ಬನ್ನಿಮಂಟಪ)

Published On :

ನಮ್ಮ ಸ್ಮೃತಿಪಟಲದಿಂದ ಮರೆಯಾದ, ಮರೆಯಾಗುತ್ತಿರುವ ಸಂಸ್ಕೃತಿಗೆ ಮರುಜೀವ ನೀಡುವ ಪ್ರಯತ್ನವಾಗಿ ಬೆಂಗಳೂರಿನ ಹೋಮ್‌ಟೌನ್ ಪ್ರೊಡಕ್ಷನ್ಸ್ 'ಹವೇಲಿ'  ಹೆಸರಿನಡಿ ವಿಶಿಷ್ಟವಾದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವನ್ನು ಏಪ್ರಿಲ್ 26 ರಂದು ಹಮ್ಮಿಕೊಂಡಿದೆ. ಉಚಿತ ಪ್ರವೇಶ ಇದ್ದು, ಪಾಸ್ ಮೂಲಕ ಪ್ರವೇಶ ಪಡೆಯಬಹುದು.
ರಾಜಸ್ತಾನದ ಭವ್ಯ ಹವೇಲಿಗಳಲ್ಲಿ ಅಂದಿನ ದಿನಗಳಲ್ಲಿ ನಡೆಯುತ್ತಿದ್ದ ಸಂಗೀತ ಮತ್ತು ನೃತ್ಯ ಈ ಕಾರ್ಯಕ್ರಮದ ಮೂಲಕ ಮರುಜೀವ ಪಡೆಯಲಿದೆ. 13 ಮಂದಿ ಪ್ರಖ್ಯಾತ ಕಲಾವಿದರು ಒಂದೇ ವೇದಿಕೆಯಲ್ಲಿ ಒಂದೇ ಸಮಯದಲ್ಲಿ ಪ್ರದರ್ಶನ ನೀಡಲಿದ್ದಾರೆ. ಖ್ಯಾತ ಪಿಟೀಲು ವಾದಕ ದೀಪಕ್ ಪಂಡಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಒಡಿಸ್ಸಿ ನೃತ್ಯಗಾತಿ ಆರುಷಿ ಮುದುಗಲ್, ಕಥಕ್‌ನ ರಾಜೇಂದ್ರ ಗಂಗಾನಿ, ಸಾರಂಗಿ ವಾದಕ ಉಸ್ತಾದ್ ಫಯಾಜ್ ಖಾನ್, ಸಿತಾರ್ ವಾದಕರಾದ ರಫೀಕ್-ಶಫೀಕ್ ಖಾನ್, ಸ್ಯಾಕ್ಸೋಫೋನ್ ವಾದಕ ರಮಣ, ಫ್ರೆಂಚ್ ಪಿಯಾನೋ ವಾದಕ ಮಿಷಿಕೊ ಮಾಂಬಾ, ಮಂಗ್ನಾನಿಯಾರ್ ಸೆಡಕ್ಷನ್ ಖ್ಯಾತಿಯ ರಾಜಸ್ತಾನದ ದೇವೋ ಖಾನ್, ಕಮೈಚಾ ವಾದಕರಾದ ಘೆನ್ವಾರ್ ಖಾನ್ ಮತ್ತು ದಾರೇ ಖಾನ್ ಹವೇಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಾಸ್‌ಗಳಿಗೆ ಸಂಪರ್ಕಿಸಿ: 080- 23413987 / 98455 03987
ಸ್ಥಳ: ಚೌಡಯ್ಯ ಸ್ಮಾರಕಭವನ, ವಯ್ಯಾಲಿಕಾವಲ್, ಬೆಂಗಳೂರು.
ದಿನಾಂಕ: 26.04.2013, ಸಮಯ: ಸಂಜೆ 6.30

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.