ವಿಧ್ವಂಸಕ ಶಕ್ತಿಗಳಿಗೆ ಸೇನಾನಿಗಳ ಪ್ರತಿಗುದ್ದು
ನಮ್ಮ ದೇಹದಲ್ಲಿ ಹೀಗೆಲ್ಲ ಕ್ರಿಯೆ ನಡೆಯುತ್ತದೆಯಾ? ಹಾಗಾದರೆ ಆಕ್ಸಿಡೆಂಡ್ಗಳಿಂದ ಪಾರಾಗುವ ದಾರಿ ಏನು?
ದಿಗಿಲು ಬೀಳಬೇಡಿ. ವಿಧ್ವಂಸಕ ಕೃತ್ಯಗಳಲ್ಲಿ ನಿರತವಾಗುವ ಅಕ್ಸಿಡೆಂಟ್ಗಳಿಗೆ ಪ್ರತಿರೋಧಕ ವ್ಯವಸ್ಥೆಯೂ ನಮ್ಮ ಶರೀರದಲ್ಲೇ ಇದೆ. ಅವನ್ನೇ ನಾವು ಆ್ಯಂಟಿಆಕ್ಸಿಡೆಂಟ್ಗಳು ಎನ್ನುವುದು. ಇವು ದೇಹವನ್ನು ಕಾಪಾಡುವ ಸೇನಾನಿಗಳಿದ್ದಂತೆ. ಆ್ಯಂಟಿಆಕ್ಸಿಡೆಂಟ್ಗಳು ನಮ್ಮ ಶಕ್ತಿಗುಂದಿಸುವ ಶಕ್ತಿಗಳನ್ನು ದುರ್ಬಲಗೊಳಿಸಬಲ್ಲವು. ವಿಷಕಾರಿ ಕಣಗಳು ದೇಹದಲ್ಲಿ ಕ್ರಿಯಾಶೀಲವಾಗುವುದನ್ನು ತಡೆಯಬಲ್ಲವು. ಆಮ್ಲಜನಕಯುಕ್ತ ಅಣುಗಳು ನಿರಾಂತಕವಾಗಿ ಸಂಚರಿಸುವಂತೆ ಮಾಡಬಲ್ಲವು. ಅಷ್ಟು ಮಾತ್ರವಲ್ಲ, ಆಕ್ಸಿಡೆಂಟ್ ಮಾಡಿರುವ ಹಾನಿಯನ್ನು ಬಹುಮಟ್ಟಿಗೆ ಸರಿಪಡಿಸಬಲ್ಲವು ಕೂಡ.
ಆ್ಯಂಟಿಆಕ್ಸಿಡೆಂಟ್ಗಳ ಪ್ರಮುಖ ಮೂಲ ಎಂದರೆ ನಮ್ಮ ಆಹಾರ. ಅದರಲ್ಲೂ ಸಸ್ಯಾಹಾರ ಅಂದರೆ ಹಣ್ಣು, ತರಕಾರಿ, ಸೊಪ್ಪುಗಳು ಆ್ಯಂಟಿಆಕ್ಸಿಡೆಂಟ್ಗಳಿಂದ ಶ್ರೀಮಂತವಾಗಿರುತ್ತವೆ. ಇಂತಹ ಆಹಾರ ಸೇವಿಸಿದಾಗ ಅವು ನಮ್ಮ ಅಂಗಾಂಗಳು ಮತ್ತು ದೇಹದಲ್ಲಿನ ದ್ರವಗಳನ್ನು ಪ್ರವೇಶಿಸಿ ಆಕ್ಸಿಡೆಂಟ್ಗಳಿಗೆ ಪ್ರತಿರೋಧ ತೋರಿಸಲು ತೊಡಗುತ್ತವೆ. ಆ ಮೂಲಕ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ವಿಜ್ಞಾನಿಗಳು ಆಹಾರದಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳನ್ನು ಪತ್ತೆ ಮಾಡಲು ಇನ್ನಿಲ್ಲದ ಆಸಕ್ತಿ ತೋರಿಸುತ್ತಿದ್ದಾರೆ. ಈಗಾಗಲೇ ಕ್ವೆರ್ಸೆಟಿನ್, ಲೈಕೊಪೆನ್, ಗ್ಲುಟಾಥಿಯೋನ್, ಲ್ಯುಟೆನ್ ಮೊದಲಾದ ಆ್ಯಂಟಿಆಕ್ಸಿಡೆಂಟ್ಗಳನ್ನು ಗುರುತಿಸಿದ್ದಾರೆ. ವಿಟಮಿನ್ ಸಿ, ವಿಟಮಿನ್ ಇ, ಬೀಟಾ ಕ್ಯಾರೊಟಿನ್, ಖನಿಜಗಳು ಆ್ಯಂಟಿಆಕ್ಸಿಡೆಂಟ್ಗಳನ್ನು ಹೊಂದಿರುವುದು ಗೊತ್ತೇ ಇದೆ.
ಹಣ್ಣು, ತರಕಾರಿ, ಸೊಪ್ಪುಗಳನ್ನು ಕೊಳ್ಳುವಾಗ ಅವುಗಳ ಬಣ್ಣದ ಬಗ್ಗೆ ಗಮನವಿರಲಿ. ದಟ್ಟ ಬಣ್ಣದಿಂದ ಕೂಡಿದ್ದರೆ ಅವುಗಳಲ್ಲಿ ಆ್ಯಂಟಿಆಕ್ಸಿಡೆಂಟ್ಗಳ ಪ್ರಮಾಣ ಹೆಚ್ಚಾಗಿದೆ ಎಂದು ಅರ್ಥ. ಪ್ಯಾಕೆಟ್ಗಳಲ್ಲಿ ಸೀಲ್ ಮಾಡಿದ, ಕ್ಯಾನುಗಳಲ್ಲಿ ತುಂಬಿಸಿಟ್ಟ ಹಣ್ಣು, ತರಕಾರಿಗಳಿಗಿಂತ ತಾಜಾ ಇದ್ದರೆ ಉತ್ತಮ. ಫ್ರಿಡ್ಜ್ನಲ್ಲಿ ಇಟ್ಟಿದ್ದರೂ ಆದೀತು. ನಿಮ್ಮ ಮಾಹಿತಿಗೆ ಹೇಳುವುದಿದ್ದರೆ- ಹಸಿರು ಅಥವಾ ಬಿಳಿ ದ್ರಾಕ್ಷಿಗಿಂತ (ಇದನ್ನು ನಮ್ಮಲ್ಲಿ ಬೆಳೆಯುವುದು ಕಡಿಮೆ) ಕೆಂಪು ದ್ರಾಕ್ಷಿ ಉತ್ತಮ. ಬಿಳಿ ಈರುಳ್ಳಿಗಿಂತ ಕೆಂಪು ಈರುಳ್ಳಿಯಲ್ಲಿ ಅಧಿಕ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ಗಳಿರುತ್ತವೆ. ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೊಲಿಗಳನ್ನು ಪೂರ್ತಿಯಾಗಿ ಬೇಯಿಸುವುದಕ್ಕಿಂತ ಹಸಿಯಾಗಿ ಅಥವಾ ಲಘುವಾಗಿ ಬೇಯಿಸಿ ಸೇವಿಸುವುದು ಉತ್ತಮ. ತರಕಾರಿಗಳನ್ನು ಹಬೆ, ನೀರಿನಲ್ಲಿ ಬೇಯಿಸುವ ಬದಲು ಮೈಕ್ರೊಓವನ್ನಲ್ಲಿಡುವುದು ಪ್ರಯೋಜನಕಾರಿ. ಕುಂಬಳಕಾಯಿ, ದಟ್ಟ ಹಳದಿ ವರ್ಣದ ಕ್ಯಾರೆಟ್, ಗೆಣಸಿನಲ್ಲಿಯೂ ಅಧಿಕ ಆ್ಯಂಟಿಆಕ್ಸಿಡೆಂಟ್ಗಳಿರುತ್ತವೆ.
ಕೆಲವರಿಗೆ ತರಕಾರಿ ಅಥವಾ ಹಣ್ಣಿನ ರಸ ಕುಡಿಯುವ ಅಭ್ಯಾಸ. ಸಂಶೋಧನೆಗಳು ಶಿಫಾರಸ್ಸು ಮಾಡುವುದು ಏನೆಂದರೆ ರಸ (ಜ್ಯೂಸ್) ಕುಡಿಯುವ ಬದಲು ಹಣ್ಣು, ತರಕಾರಿಗಳನ್ನು ಹಾಗೇ ತಿಂದರೆ ಅಧಿಕ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ಗಳು ದೇಹ ಪ್ರವೇಶಿಸಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದು. ಜ್ಯೂಸ್ ಕುಡಿಯುವುದಿದ್ದರೂ ಅದು ತಾಜಾ ಇರಲಿ. ಕ್ಯಾನ್ನಲ್ಲಿ ತುಂಬಿಸಿಟ್ಟಿರುವುದು ಬೇಡವೇ ಬೇಡ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

