ಮಾತೃಹೃದಯದ ಸ್ವಾಗತ!
ಸ್ವಾಮಿ ವಿವೇಕಾನಂದರು ಭಾರತಕ್ಕೆ ಮರಳಿದ ಘಟನೆಯು ಆಧುನಿಕ ಭಾರತದ ಇತಿಹಾಸದಲ್ಲೊಂದು ಮೈಲುಗಲ್ಲು. ಏಕೆಂದರೆ ಸಮಗ್ರ ಭಾರತದ ಸಮಸ್ತ ಜನತೆಯು ತಾವು ಆರ್ಯರು, ದ್ರಾವಿಡರು, ಉತ್ತರಭಾರತೀಯರು, ದಕ್ಷಿಣಭಾರತೀಯರು, ಹಿಂದೂಸ್ತಾನಿಗಳು, ಬಂಗಾಳಿಗಳು, ಕನ್ನಡಿಗರು, ತಮಿಳರು ಎಂಬೆಲ್ಲ ಭೇದಭಾವಗಳನ್ನು ಬದಿಗೊತ್ತಿ ಏಕಭಾವದಿಂದ ಸ್ವಾಮಿ ವಿವೇಕಾನಂದರನ್ನು ಭಾರತಪುತ್ರ ಎಂಬ ಹೆಮ್ಮೆಯಿಂದ ಸ್ವಾಗತಿಸಿದರು! ಅಭಿನಂದಿಸಿದರು! ಗೌರವಿಸಿದರು!
ಭಾರತದ ರಾಷ್ಟ್ರೀಯ ನಾಯಕನೆಂದು ಸಮಸ್ತ ಭಾರತೀಯರಿಂದ ಸನ್ಮಾನಿತರಾದ ಪ್ರಪ್ರಥಮ ವ್ಯಕ್ತಿಯೆಂದರೆ ಸ್ವಾಮಿ ವಿವೇಕಾನಂದರು! ಹಿಂದೂಧರ್ಮಕ್ಕೆ ನವನೂತನ ವ್ಯಾಖ್ಯಾನಕಾರರಾಗಿ, ಹಿಂದೂಧರ್ಮದಲ್ಲಿ ನವಚೇತನ ತುಂಬಿದವರಾಗಿ, ಯುಗಪ್ರವರ್ತನಾಚಾರ್ಯ ಎನಿಸಿದರು. ಅವಹೇಳನದ ವಸುಗಳಾಗಿದ್ದ ಭಾರತ ಹಾಗೂ ಹಿಂದೂಧರ್ಮಗಳ ಮೇಲಿನ ಕಳಂಕವನ್ನು ತೊಡೆದು ಹಾಕಿ, ಸನಾತನ ಭವ್ಯಪರಂಪರೆಯನ್ನು ಪುನರುತ್ಥಾನಗೊಳಿಸಿದ ಮಹಾನುಭಾವ! ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಿಂದೂಧರ್ಮದ ಕೀರ್ತಿಪತಾಕೆಯನ್ನು ನೆಟ್ಟ ವಿಶ್ವವಿಜೇತ ವೀರಪುತ್ರ! ಹಿಂದೂಧರ್ಮದಲ್ಲಿ ಅಡಗಿದ್ದ ಅನರ್ಘ್ಯರತ್ನವಾದ ವೇದಾಂತವೊಂದೇ ವಿಶ್ವಾತ್ಮಕ ಧರ್ಮವೆಂದು ಸಾರಿದ ವಿಶ್ವಮಾನವ ಸ್ವಾಮಿ ವಿವೇಕಾನಂದ! ಇವರು ಕೇವಲ ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಲ್ಲ, ಅವರು ಪರಮ ರಾಷ್ಟ್ರಪ್ರೇಮಿ ಎಂಬುದನ್ನು ಅವರ ರಾಷ್ಟ್ರಾಭಿಮಾನದ ನುಡಿಗಳು ಸಾರುತ್ತವೆ.
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

