ಬೈಟುಕಾಫಿ

ಬೈಸಿಕಲ್ ಸವಾರರೂ ಜಾಗೃತರಾಗಬೇಕು

Published On :

ಸುರಕ್ಷಿತ ಸೈಕಲ್ ಸವಾರಿ ಹೇಗೆ?
ಪಾದಚಾರಿಗಳ ಸುರಕ್ಷತೆಗೆ ಪೊಲೀಸರು ನಾನಾ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಅದೇ ರೀತಿ ಸೈಕಲ್ ಸವಾರರು ಸಹ ಒಂದು ರೀತಿ ಇದೇ ವರ್ಗಕ್ಕೆ ಸೇರುತ್ತಾರೆ. ಹಾಗಾಗಿ ಸೈಕಲ್ ಸವಾರರ ಬಗ್ಗೆಯೂ ಗಮನಹರಿಸುವುದು ಅತಿಮುಖ್ಯ.
ಪೊಲೀಸರಿಗೆ ಪ್ರತ್ಯೇಕ ಮಾರ್ಗಗಳಿಲ್ಲ, ಹಾಗಾಗಿ ಸೈಕಲ್ ಸವಾರರು ಬೇರೆ ವಾಹನಗಳು ಸಂಚರಿಸುವ ರಸ್ತೆಯಲ್ಲೇ ಸಂಚರಿಸಬೇಕು. ಆದ್ದರಿಂದ ಅವರು ಕೆಲವು ಅಗತ್ಯ ಮಾಹಿತಿಗಳನ್ನು ತಿಳಿದಿರಬೇಕು. ಇಲ್ಲವಾದಲ್ಲಿ ದೊಡ್ಡ/ಬೇರೆ ವಾಹನಗಳ ಭರಾಟೆಯಲ್ಲಿ ಅಪಾಯ ತಪ್ಪಿದ್ದಲ್ಲ.

ಮಾಹಿತಿ:

  • ಸೈಲಕ್ ಸವಾರರು ಮೊದಲು ತಮ್ಮ ವಾಹನದ ಬೆಲ್(ಗಂಟೆ) ಸುಸ್ಥಿತಿಯಲ್ಲಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಸೈಕಲ್‌ಗೆ ದೀಪವನ್ನು ಅಳವಡಿಸಿ. ಅದೂ ಸಹ ಹಾಳಾಗದಂತೆ ಎಚ್ಚರವಹಿಸಿ.
  • ನಿಮ್ಮ ಬೈಸಿಕಲ್‌ನ ಬ್ರೇಕ್, ಚಕ್ರದ ಕಡ್ಡಿಗಳು ಉತ್ತಮ ಸ್ಥಿತಿಯಲ್ಲಿರಲಿ. ಚಕ್ರಕ್ಕೆ ಅಗತ್ಯ ಪ್ರಮಾಣದಷ್ಟು ಗಾಳಿ ತುಂಬಿಸುವುದನ್ನು ಮರೆಯಬೇಡಿ. ಇದಿಷ್ಟು ಸರಿಯಿದ್ದಲ್ಲಿ, ಪ್ರಯಾಣ ಸರಿಯಿರುತ್ತದೆ.
  • ಇನ್ನು ಬೈಸಿಕಲ್ ಸವಾರರು ಸಂಚರಿಸಲು ಪ್ರತ್ಯೇಕ ಮಾರ್ಗ ಇಲ್ಲದ ಕಾರಣ, ರಸ್ತೆಯ ಎಡಬದಿಯಲ್ಲಿ ನಿಧಾನವಾಗಿ ಸಂಚರಿಸಿ. ಸಾಧ್ಯವಾದಷ್ಟು ಬಲಭಾಗದಲ್ಲಿ ಸಂಚರಿಸುವುದು ಕಡಿಮೆ ಮಾಡಿ. ಬೇರೆ ವಾಹನಗಳ ಮಧ್ಯದಲ್ಲಿ ಅಡ್ಡಾದಿಡ್ಡಿ ನುಗ್ಗಬೇಡಿ.
  • ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ, ಬೈಸಿಕಲ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಲ್ಲ. ಆದರೂ ಸಹ ಬೈಸಿಕಲ್ ಸವಾರರು ಹೆಲ್ಮೆಟ್ ಧರಿಸಿದರೆ ಮುಂದಿನ ಅಪಾಯ ತಡೆಗಟ್ಟಬಹುದು. ಒಂದು ವೇಳೆ ಅಪಘಾತ ಸಂಭವಿಸಿದರೆ ತಲೆಗೆ ಬೀಳುವ ಪೆಟ್ಟು ನಿಯಂತ್ರಿಸಬಹುದು.
- ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.