ರೈತನ ಬುದ್ಧಿವಂತಿಕೆ (ಸಣ್ಸ್ಟೋರಿ)
ನಗರದ ಯುವಕನೊಬ್ಬ ಹಳ್ಳಿಗೆ ಹೊರಟಿದ್ದ. ದಾರಿಯಲ್ಲಿ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ನೋಡಿ ಕೇಳಿದ, 'ಏನಪ್ಪ, ಇಲ್ಲಿಂದ ಹಳ್ಳಿಗೆ ಹೋಗಲು ಎಷ್ಟು ಸಮಯ ಹಿಡಿಯಬಹುದು?'
ಅದಕ್ಕೆ ರೈತನೆಂದ 'ಅದೆಲ್ಲಾ ಹೇಳಲು ಸಾಧ್ಯವಿಲ್ಲ!' ಯುವಕನಿಗೆ ಅವಮಾನವಾದಂತಾಗಿತ್ತು. ಕೋಪದಿಂದ ಅಲ್ಲಿಂದ ಹೊರಟ. ಅವನು ಸ್ವಲ್ಪ ದೂರ ಹೋದಾಗ ರೈತನು ಕೂಗಿ 'ಅರ್ಧ ಗಂಟೆ ಹಿಡಿಯುತ್ತದೆ' ಎಂದ.
ಯುವಕ ಕೂಡ ಕೂಗಿ ಕೇಳಿದ 'ಮೊದಲು ಕೇಳಿದಾಗ ಏಕೆ ಹೇಳಲಿಲ್ಲ?'
ಅದಕ್ಕೆ ರೈತ 'ನೀನು ಎಷ್ಟು ವೇಗವಾಗಿ ನಡೆಯುತ್ತೀಯಾ ಎಂಬುದನ್ನು ನೋಡದೇ ಹೇಗೆ ಹೇಳಲಿ? ರೈತ ಮರು ಪ್ರಶ್ನಿಸಿದ.
ನಾಯಿ ಮತ್ತು ಬೆಕ್ಕು
ಬಹಳ ಹಿಂದೆ ಹಳ್ಳಿಯೊಂದರಲ್ಲಿ ನಾಯಿ ಮತ್ತು ಬೆಕ್ಕು ಗೆಳೆಯರಾಗಿದ್ದವು. ಅವು ಒಟ್ಟಿಗೇ ವಾಸಿಸುತ್ತ, ಒಟ್ಟಿಗೆ ಆಹಾರವನ್ನೂ ಹುಡುಕುತ್ತಿದ್ದವು. ಒಂದು ದಿನ ಬೆಕ್ಕು ನಾಯಿಗೆ ಹೇಳಿತು, 'ನಾವು ಜತೆಯಾಗಿ ಆಹಾರ ಹುಡುಕಿದರೆ ಪ್ರಯೋಜನವಿಲ್ಲ, ಬೇರೆಬೇರೆಯಾಗಿ ಹೋಗಿ ಆಹಾರ ಸಂಗ್ರಹಿಸೋಣ'. ನಾಯಿ ಒಪ್ಪಿಕೊಂಡಿತು.
ಇಬ್ಬರೂ ಬೇರೆಬೇರೆ ಕಡೆ ಹೊರಟವು. ಬೆಕ್ಕು ಇಲಿಗಳನ್ನು, ನಾಯಿ ಕೋಳಿಗಳನ್ನು ತಂದವು. ಇಬ್ಬರೂ ಸಮಪಾಲು ಮಾಡಿಕೊಂಡವು. ನಾಯಿ ತನ್ನ ಪಾಲಿನ ಆಹಾರವನ್ನು ಗಬಗಬನೆ ತಿಂದು, ಬೆಕ್ಕಿನ ಪಾಲನ್ನೂ 0ತಿನ್ನತೊಡಗಿತು. ಇದರಿಂದ ಬೆಕ್ಕಿಗೆ ಕೋಪ ಬಂದು 'ನೀನು ಮೋಸಗಾರ, ಸ್ನೇಹಕ್ಕೆ ಅರ್ಹನಲ್ಲ. ಇನ್ನು ಮುಂದೆ ನಿನ್ನ ಗೆಳೆತನ ನನಗೆ ಬೇಡ' ಎಂದು ಓಡಿಹೋಯಿತು. ನಾಯಿಗೆ ಪಶ್ಚಾತ್ತಾಪದಿಂದ, ಕ್ಷಮಾಪಣೆ ಕೇಳಲೆಂದು ಬೆಕ್ಕು ಕಂಡರೆ ಈಗಲೂ ಅಟ್ಟಿಸಿಕೊಂಡು ಹೋಗುತ್ತದೆ!
-ವಿ. ಹೇಮಂತ ಕುಮಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

