ನೆಲಕ್ಕೆ ಕಿವಿಗೊಟ್ಟು ಆಲಿಸುವವ
ರಾವುತನೊಬ್ಬ ಮರುಭೂಮಿಯಲ್ಲಿ ವಾಹನದಲ್ಲಿ ಹೋಗುತ್ತಿರುವಾಗ ತನ್ನ ಒಂದು ಕಿವಿಯನ್ನು ರಸ್ತೆಗೆ ತಾಗಿಸಿಕೊಂಡು ಮಾರ್ಗದಲ್ಲಿ ಮಲಗಿಕೊಂಡಿದ್ದವನೊಬ್ಬನನ್ನು ನೋಡಿದ.
'ಏನು ಸಮಾಚಾರ?' ರಾವುತ ಕೇಳಿದ.
'ಅಗಲವಾದ ಪೇಲವ ಮುಖದವ ಮತ್ತು ಜರ್ಮನ್ ಶೆಫರ್ಡ್ ನಾಯಿಯೊಂದಿಗೆ ಕಡು ಹಸಿರು ಬಪಣ್ಣದ ಮರ್ಸಿಡಿಸ್ ಬೆಂಝ್ ಕಾರನ್ನು ಚಲಾಯಿಸುತ್ತಿದ್ದವನು ಒಬ್ಬ ಕೆಂಗೂದಲಿನವ. ಪಶ್ಚಿಮಕ್ಕೆ ಹೋಗುತ್ತಿದ್ದ ಕಾರಿನ ಪರವಾನಗಿ ಫಲಕದ ನಂಬರ್ ಎಸ್.ಡಿ.ಟಿ. 965.'
'ಏನಾಶ್ಚರ್ಯ! ನಿಮಗೆ ಕೇವಲ ನೆಲಕ್ಕೆ ಕಿವಿಗೊಟ್ಟರೆ ಇವೆಲ್ಲ ವಿವರಗಳು ತಿಳಿಯುತ್ತವೆಯೇ?' ಎಂದ ರಾವುತ.
'ನಾನು ನೆಲಕ್ಕೆ ಕಿವಿಗೊಟ್ಟು ಆಲಿಸುತ್ತಿಲ್ಲ. ಆ ಬಡ್ಡೀಮಗ ತನ್ನ ಕಾರನ್ನು ನನಗೆ ಢಿಕ್ಕಿ ಹೊಡೆದು ನನ್ನನ್ನು ಬೀಳಿಸಿ ಹೋಗಿದ್ದಾನೆ.'
ನೀತಿ: ನಮಗೆ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದಾಕ್ಷಣ ಅದು ನಿಜವಾಗಿರಬೇಕೆಂದೇನೂ ಇಲ್ಲ.
ವಾಸ್ತವ
ಬಸ್ಸಿನಲ್ಲಿ ಪಯಣಿಸುವವನೊಬ್ಬ ತನ್ನ ಪಕ್ಕದಲ್ಲಿ ತರುಣನೊಬ್ಬ ಕುಳಿತಿರುವುದನ್ನು ಗಮನಿಸಿದ. ಅವನು ನೋಡಲು ಹಿಪ್ಪಿಯಂತಿದ್ದ. ಅವನು ಒಂದೇ ಪಾದರಕ್ಷೆಯನ್ನು ಧರಿಸಿದ್ದ.
ಈತ ಕೇಳಿದ್ಛ 'ನಿನ್ನ ಒಂದು ಪಾದರಕ್ಷೆ ಕಳೆದುಹೋಗಿದೆಯಲ್ಲವೆಯ'
ತರುಣ ಉತ್ತರಿಸಿದ 'ಇಲ್ಲ. ನನಗೆ ಒಂದು ಸಿಕ್ಕಿದೆ.'
ನೀತಿ: ನಮಗೆ ನಿಚ್ಚಳವಾಗಿದೆ ಎಂದೆನಿಸುವುದೆಲ್ಲ ಸತ್ಯ ವಾಗಿರಬೇಕೆಂದೇನೂ ಇಲ್ಲ. <
-ನಂದಿನಿ ಡಿ. ಕಾಮತ್
ಮೂಲ: ಅಂತೋನಿ ಡಿಮೆಲ್ಲೊ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

