ಬಂಗಾಳದ ದೀಪ ವಿಶ್ವಜ್ಯೋತಿಯಾಯಿತು!
ನರೇಂದ್ರನು ರಾಮಕೃಷ್ಣರನ್ನು ಹಲವು ಬಗೆಯಲ್ಲಿ ಪರೀಕ್ಷಿಸಿದರೂ, ಅವರು ಅವನಿಗೆ ಎಷ್ಟೆಲ್ಲಾ ಅನುಭವ, ದರ್ಶನಗಳನ್ನು ಮಾಡಿಸಿಕೊಟ್ಟರೂ, ಕೊನೆಗೆ ತಮ್ಮ ಆಧ್ಯಾತ್ಮಿಕ ಸಂಪತ್ತನ್ನು ಧಾರೆಯೆರೆದರೂ ನರೇಂದ್ರನ ಮನಸ್ಸಿನಲ್ಲಿ ಅವರ ಬಗ್ಗೆ ಸಂದೇಹವೊಂದು ಉಳಿದಿತ್ತು. 'ಸಾಮಾನ್ಯ ಮರ್ತ್ಯನಂತೆ ಮೃತ್ಯುಶಯ್ಯೆಯಲ್ಲಿ ಮಲಗಿರುವ ಈ ರಾಮಕೃಷ್ಣರು ಯಾರು?' ಈ ಸಂದೇಹ ಮನಸ್ಸಿನಲ್ಲಿ ಸುಳಿದದ್ದೇ ತಡ, ರಾಮಕೃಷ್ಣರು ತಮ್ಮ ಸರ್ವಶಕ್ತಿಯನ್ನು ಒಗ್ಗೂಡಿಸಿಕೊಂಡು ಉದ್ಗರಿಸಿದರು, 'ಓ ನನ್ನ ನರೇನ್, ನಿನಗಿನ್ನೂ ನಂಬಿಕೆಯಾಗಲಿಲ್ಲವೆ? ಹಿಂದೆ ಯಾರು ರಾಮನಾಗಿದ್ದನೋ, ಯಾರು ಕೃಷ್ಣನಾಗಿದ್ದನೋ ಅವನೇ ಈಗ ಈ ಶರೀರದಲ್ಲಿ ರಾಮಕೃಷ್ಣನಾಗಿ ಅವತರಿಸಿದ್ದಾನೆ. ಆದರೆ ಇದು ಕೇವಲ ನಿನ್ನ ವೇದಾಂತದ ದೃಷ್ಟಿಯಿಂದಲ್ಲ, ನಿಜವಾಗಿಯೂ' ಗುರುಗಳ ಈ ಹಠಾತ್ ಉದ್ಗಾರವನ್ನು ಕೇಳಿ ನರೇಂದ್ರ ಸಿಡಿಲುಬಡಿದವನಂತೆ ಬೆಚ್ಚಿಬಿದ್ದ. ಮರುಕ್ಷಣವೇ ರಾಮಕೃಷ್ಣರ ನಿಜಸ್ವರೂಪವನ್ನು ಅರಿತು ಅತ್ಯಾನಂದದಿಂದ ಕಂಬನಿ ಹರಿಸಿದ.
ರಾಮಕೃಷ್ಣರು ಶರೀರ ತ್ಯಾಗ ಮಾಡಲು ಸಿದ್ಧರಾಗುತ್ತಿದ್ದಾರೆ. ಆಗಸ್ಟ್ ತಿಂಗಳ ಆರಂಭದಲ್ಲೇ ತಮ್ಮ ಶಿಷ್ಯನೊಬ್ಬನಿಗೆ ಬಂಗಾಳಿ ಪಂಚಾಂಗವನ್ನು ಓದಲು ಹೇಳಿದರು. ಆಗಸ್ಟ್ 14ರ ವಿವರವನ್ನು ಹೇಳಿದಾಗ ಅವನಿಗೆ ಓದುವುದನ್ನು ನಿಲ್ಲಿಸಲು ಹೇಳಿದ್ದರು. ಈಗ ಆ ದಿನ ಸನ್ನಿಹಿತವಾಯಿತು. 14ರ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ರಾಮಕೃಷ್ಣರುಎಲ್ಲರನ್ನೂ ಒಮ್ಮೆ ನೋಡಿ, ಕಾಳಿ! ಕಾಳಿ! ಕಾಳಿ! ಎಂದು ಉಚ್ಚರಿಸುತ್ತಾ ದಿಂಬಿನ ಮೇಲೆ ನಿಧಾನವಾಗಿಒರಗಿಕೊಂಡರು. ಆಗ ಅವರ ಶರೀರದಲ್ಲಿ ಒಂದು ಕಂಪನವುಂಟಾಯಿತು. ಅವರು ಗಾಢ ಸಮಾಧಿಗೇರಿದರು. ಇಲ್ಲಿಯವರೆಗೆ ಬಂಗಾಳದಲ್ಲಿ ಬೆಳಗುತ್ತಿದ್ದ ನಂದಾದೀಪ ಈಗ ವಿಶ್ವಜ್ಯೋತಿಯಾಯಿತು.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

