ಬೈಟುಕಾಫಿ

ಸಂಶಯದಿಂದ ದೂರವಿರಿ

Published On :

ಸಂಶಯಾತ್ಮಾ ವಿನಶ್ಯತಿ- ಹೌದು, ಈ ಸಂಶಯ ಎನ್ನುವುದಿದೆಯಲ್ಲಾ ಅದಕ್ಕಿಂತ ದೊಡ್ಡ ಶತ್ರು ಈ ಜೀವನದಲ್ಲಿ ಮತ್ತೊಂದಿಲ್ಲ. ನಮ್ಮ ತಲೆಯೊಳಗೆ ಒಮ್ಮೆ ಸಂಶಯದ ಹುಳು ಹೊಕ್ಕರೆ ಅದನ್ನು ನಾಶಗೊಳಿಸುವುದು ತೀರಾ ಕಷ್ಟ ಸಾಧ್ಯ. ಅದು ನಮ್ಮೊಳಗೇ ಕೊರೆಯುತ್ತ ಇರುತ್ತದೆ. ಅಷ್ಟಕ್ಕೇ ಸೀಮಿತವಾದರೆ ಚಿಂತೆಯಿರಲಿಲ್ಲ. ಹಾಗೆ ಕೊರೆಯುತ್ತ, ಕೊರೆಯುತ್ತ ಇಡೀ ದೇಹವನ್ನು ಆವರಿಸಿಕೊಳ್ಳುತ್ತದೆ. ಅಲ್ಲಿಗೇ ನಿಲ್ಲುವುದಿಲ್ಲ. ಇಡೀ ನಮ್ಮ ದಿನವನ್ನು ವ್ಯಾಪಿಸುತ್ತದೆ. ಹಾಗೆಯೇ ಇಡೀ ಜೀವನಕ್ಕೆ ಅದು ತನ್ನ ಕಬಂಧ ಬಾಹುವನ್ನು ಚಾಚುತ್ತದೆ. ಅಲ್ಲಿಗೆ ಮುಗಿದಂತೆಯೇ. ಮುಂದೆ ಬೇರಾವ ಚಿಂತನೆಯೂ ಮನಸ್ಸಿನೊಳಗೆ ಬರುವುದೇ ಇಲ್ಲ. ನಮ್ಮ ಮೇಲೇ ನಾವು ನಂಬಿಕೆಯನ್ನು ಕಳೆದುಕೊಂಡು ಬಿಟ್ಟಿರುತ್ತೇವೆ. ಪ್ರತಿಯೊಂದು ವರ್ತನೆ, ಪ್ರತಿ ಬೆಳವಣಿಗೆಗಳೂ ನಮಗೆ ನಕಾರಾತ್ಮಕವಾಗಿಯೇ ಕಾಣಿಸುತ್ತ ಹೋಗುತ್ತದೆ. ಕೊನೆಕೊನೆಗೆ ಅದೇ ಖಿನ್ನತೆಗೆ ತಿರುಗುತ್ತದೆ. ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತೇವೆ. ಯಾರನ್ನೂ ನಂಬುವ ಪರಿಸ್ಥಿತಿಯೇ ಇಲ್ಲವಾದುದ್ದರಿಂದ ಆ ಸಂದರ್ಭದಲ್ಲಿ ಒಂದು ಪುಟ್ಟ ಸಾಂತ್ವನ, ಸಂತೈಕೆಗೂ ಆಪ್ತರೆಂಬುವವರು ಇರುವುದಿಲ್ಲ. ಒಂಟಿತನ ಬಿಟ್ಟೂ ಬಿಡದೇ ಕಾಡತೊಡಗುತ್ತದೆ. ಇಲ್ಲಿ ಅತ್ಯಂತ ಗಮನಾರ್ಹ ಸಂಗತಿ ಎಂದರೆ ಇಂಥ ಒಂಟಿತನ ಮತ್ತೆ ಮತ್ತೆ ನಮ್ಮನ್ನು ಇನ್ನಷ್ಟು ನಕಾರಾತ್ಮಕ ಚಿಂತನೆಯೆಡೆಗೆ ತಳ್ಳುತ್ತದೆ. ಇದೊಂದು ರೀತಿಯಲ್ಲಿ ಒಂದಕ್ಕೊಂದು ಪೂರಕ. ಸಂಶಯ ನಮ್ಮನ್ನು ಒಂಟಿಯಾಗಿಸುತ್ತದೆ. ಒಂಟಿತನ ಮತ್ತಷ್ಟು ಸಂಶಯದೆಡೆಗೆ ತಳ್ಳುತ್ತ ಸಾಗುತ್ತದೆ. ಕೊನೆಗೆ ಬದುಕೇ ಸಾಕೆನಿಸುವ ಅಪಾಯಕಾರಿ ಹಂತಕ್ಕೆ ಬಂದು ತಲುಪಿಬಿಡುತ್ತೇವೆ. ಮತ್ತೊಂದು ಮಹತ್ವದ ಸಂಗತಿಯೆಂದರೆ ಇದು ಸಂಶಯ ಪೀಡಿತ ವ್ಯಕ್ತಿಗಳಿಗಷ್ಟೇ ಅಪಾಯಕಾರಿಯಲ್ಲ. ಆತನ ಸುತ್ತಮುತ್ತಲಿನವರು, ಕುಟುಂಬ ಸದಸ್ಯರು, ಸ್ನೇಹಿತರು ಎಲ್ಲರನ್ನೂ ಸಂಕಷ್ಟಕ್ಕೆ ಈಡು ಮಾಡುತ್ತದೆ. ಅದಕ್ಕೆ ಮದ್ದೆಂಬುದೇ ಇಲ್ಲ. ಇರುವ ಏಕೈಕ ಪರಿಹಾರ ಎಂದರೆ ನಮ್ಮ ಸಂಶಯದ ಮನೋಪ್ರವೃತ್ತಿಯನ್ನೇ ಸಂಶಯದಿಂದ ನೋಡಿ ನಾವು ಅದರಿಂದ ದೂರವಿದ್ದುಬಿಡುವುದು. <

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.