ನನಗೆ ಮನೆಯಲ್ಲಿ ತಾಯ್ತಂದೆ ಯರಿದ್ದಾರೆ!
ನರೇಂದ್ರನ ಮನಸ್ಸಿನಲ್ಲಿ ಶ್ರೀರಾಮಕೃಷ್ಣರೇ ತುಂಬಿಬಿಟ್ಟರು. ಅವರ ಹಾವಭಾವ, ಸಮಾಧಿಸ್ಥಿತಿಗಳೆಲ್ಲ ವಿಚಿತ್ರವೆನಿಸಿತು. ಅದರಲ್ಲೂ ತನ್ನನ್ನು ಕಂಡರೆ ಏಕೆ ಹಾಗಾಡುತ್ತಾರೆ? ಬಹುಶಃ ಹುಚ್ಚಿರಬಹುದೇ? ಹೀಗೆ ಆಲೋಚಿಸುತ್ತ ನರೇಂದ್ರ ರಾಮಕೃಷ್ಣರಲ್ಲಿಗೆ ಹೊರಟ.
ರಾಮಕೃಷ್ಣರು ತಮ್ಮ ಕೋಣೆಯಲ್ಲಿ ಸಣ್ಣ ಮಂಚದ ಮೇಲೆ ಕುಳಿತಿದ್ದರು. ನರೇಂದ್ರನನ್ನು ಕಾಣುತ್ತಲೇ ಅವರಿಗೆ ಮಹದಾನಂದವಾಯಿತು. ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡ ತಕ್ಷಣ ಅವರಿಗೆ ಭಾವಾವೇಶವುಂಟಾದಂತಾಗಿ ಬಲಪಾದವನ್ನು ಎತ್ತಿ ನರೇಂದ್ರನ ಮೈಮೇಲಿಟ್ಟರು. ಅವನಿಗೆ ಇದು ವಿಚಿತ್ರವೆನಿಸಿದರೂ ಅವರ ದಿವ್ಯ ಸ್ಪರ್ಶದಿಂದ ವಿಶೇಷ ಅನುಭವವಾಗತೊಡಗಿತು. ಅವರ್ಣನೀಯ ಅನುಭವದ ತೀವ್ರತೆಯನ್ನು ತಾಳಲಾರದೆ, 'ನನಗೇನು ಮಾಡುತ್ತಿದ್ದೀರಿ ನೀವು? ನನಗೆ ಮನೆಯಲ್ಲಿ ತಾಯ್ತಂದೆಯರಿದ್ದಾರೆ!' ಎಂದು ಕೂಗಿಕೊಂಡ. ಚೀರಾಟವನ್ನು ಕೇಳಿ ರಾಮಕೃಷ್ಣರು ನಕ್ಕುಬಿಟ್ಟರು. ಬಳಿಕ ಅವನ ಎದೆಯನ್ನು ನೇವರಿಸುತ್ತಾ 'ಇಂದಿಗೆ ಇಷ್ಟು ಸಾಕು, ಮುಂದೆ ಸಕಾಲದಲ್ಲಿ ಎಲ್ಲವೂ ಆಗುತ್ತದೆ' ಎಂದರು. ಅಚ್ಚರಿಯೆಂದರೆ ನರೇಂದ್ರ ತಕ್ಷಣವೇ ಯಥಾಸ್ಥಿತಿಗೆ ಬಂದ. ಈ ವಿಚಿತ್ರವನ್ನು ಅರ್ಥ ಮಾಡಿಕೊಳ್ಳಲಾಗದೆ ದಿಗ್ಭ್ರಾಂತನಾದ.
ರಾಮಕೃಷ್ಣರ ನಡೆ ನರೇಂದ್ರನಿಗೆ ನಿಗೂಢವಾಗಿ ಕಾಡತೊಡಗಿತು. ಅವರು ನನಗೆ ಏನು ಮಾಡಿದರು? ವಶೀಕರಣವೇ? ಸಮ್ಮೋಹಿನಿಯೇ? ಅವರ ಹುಚ್ಚುತನವೇ? ಆದರೆ ಅವರ ನಿಷ್ಕಾಮಪ್ರೇಮ ಇವುಗಳನ್ನೆಲ್ಲಾ ಮೀರಿದ್ದು ಅಲ್ಲವೆ! ಧೃತಿಗೆಡದ ನರೇಂದ್ರ ಈ ನಿಗೂಢವನ್ನು ಬೇಧಿಸಿಯೇ ಸಿದ್ಧ ಎಂದು ಅಂದೇ ದೃಢನಿಶ್ಚಯ ಮಾಡಿದ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

