ಬೈಟುಕಾಫಿ

ಎಲ್ಲದಕ್ಕೂ ಸಲ್ಲುವ ಕಾಳುಗಳು!

Published On :

ಸಾಲ್ಟ್ ಡಯಟ್ ಬಗ್ಗೆ ಏಕೆ ಹೇಳಬೇಕಾಯಿತು ಎಂದರೆ ಕೆಲವು ಕಾಳುಗಳನ್ನು ಉಪ್ಪಿನ ಜತೆ ಬೇಯಿಸಿದರೆ ರುಚಿ ಹೆಚ್ಚು. ಹಾಗಂತ ಸಿಕ್ಕಾಪಟ್ಟೆ ಉಪ್ಪು ಹಾಕಿಕೊಂಡರೆ ಅದು ಒಳ್ಳೆಯದಲ್ಲ. ಕೆಲವರು ಉಪ್ಪಿನ ರುಚಿಗಾಗಿಯೇ ಅದರ ರಸವನ್ನು ಕುಡಿಯುವವರಿದ್ದಾರೆ. ಕಾಳುಗಳನ್ನು ಬೇಯಿಸಿದ ರಸ ಕುಡಿಯುವುದು ಒಳ್ಳೆಯದೇ. ಆದರೆ ಜಾಸ್ತಿ ಉಪ್ಪು ಹಾಕಿಕೊಂಡು, ಅದರ ಟೇಸ್ಟ್‌ಗಾಗಿಯೇ ಕುಡಿಯುವುದು ಒಳ್ಳೆಯದಲ್ಲ.
ಕೊಲೆಸ್ಟರಾಲ್ ಕಡಿಮೆ ಮಾಡಲು ಕಾಳುಗಳು ಬೇಕು. ಅದರಲ್ಲೂ ಸೋಯಾ ಕಾಳು ಅತ್ಯುತ್ತಮ. ಸೋಯಾದಲ್ಲಿ ಕೊಲೆಸ್ಟರಾಲ್ ಕಡಿಮೆ ಮಾಡುವ ಅಂಶಗಳು ಬೇಕಾದಷ್ಟಿವೆ ಎನ್ನುವುದು ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ. ಅಂದರೆ ತ್ವರಿತವಾಗಿ ಕೊಲೆಸ್ಟರಾಲ್ ಕಡಿಮೆ ಮಾಡಿಕೊಳ್ಳಲು ಸೋಯಾಬೀನ್  ಒಳ್ಳೆಯದು ಎನ್ನುವುದು ಸಂಶೋಧಕರ ಅಭಿಪ್ರಾಯ. ಸೋಯಾದಲ್ಲಿರುವ ಪ್ರೊಟೀನ್ ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ. ಆದರೆ ಸೋಯಾ ಸಾಸ್ ಮತ್ತು ಸೋಯಾಬೀನ್ ಎಣ್ಣೆ ಮಾತ್ರ ಒಳ್ಳೆಯದಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಂಡಿರಿ.
ಕಾಳುಗಳನ್ನು ಕೇವಲ ಕೊಲೆಸ್ಟರಾಲ್ ಕಡಿಮೆ ಮಾಡುವುದಷ್ಟಕ್ಕೇ ಸೀಮಿತಗೊಳಿಸಬೇಕಿಲ್ಲ. ಅವು ಅತ್ಯುತ್ತಮ ಆರೋಗ್ಯವರ್ಧಕಗಳು ಕೂಡ. ಚೀನಾದ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿ ಕಾಳುಗಳಿಗೆ ಎಲ್ಲಿಲ್ಲದ ಮಹತ್ವ. ಮಧ್ಯಪ್ರಾಚ್ಯದಲ್ಲೂ ಕಾಳುಗಳಿಲ್ಲದ ಡಯಟ್ ಇಲ್ಲ. ನಮ್ಮಲ್ಲಿ ಕೂಡ ಆಯುರ್ವೇದದಲ್ಲಿ ದ್ವಿದಳ ಧಾನ್ಯಗಳು ಮತ್ತು ಕಾಳುಗಳಿಗೆ ಭಾರಿ ಮಹತ್ವ ಉಂಟು. ಕನಿಷ್ಠ ಒಂದು ಹೊತ್ತಿನ ಊಟದಲ್ಲಾದರೂ ಕಾಳುಗಳು ಇರಬೇಕು ಎಂದು ಆಯುರ್ವೇದ ಪಂಡಿತರು ಶಿಫಾರಸ್ಸು ಮಾಡುತ್ತಾರೆ.
ಕಾಳುಗಳಲ್ಲಿ ಕೊಬ್ಬು ಕಡಿಮೆ ಇರುವುದು ಮಾತ್ರವಲ್ಲದೆ ಕಾರ್ಬೊಹೈಡ್ರೇಟ್‌ಗಳಿಂದ  ಸಮೃದ್ಧವಾಗಿರುತ್ತವೆ. ಪ್ರೊಟೀನ್ ಮತ್ತು ನಾರು ಹೇರಳವಾಗಿರುತ್ತವೆ. ವಿಟಮಿನ್‌ಗಳೂ ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಎಲ್ಲ ಬಗೆಯ ದೋಷಗಳನ್ನು ವಾತ, ಪಿತ್ಥ ಅಥವಾ ಕಫ ದೋಷಗಳನ್ನು ನಿವಾರಿಸುತ್ತವೆ. ಆಲೋಪಥಿಯಲ್ಲಿ ಔಷಧವೇ ಇಲ್ಲ ಎಂದು ನಂಬಿಕೊಳ್ಳಲಾಗಿರುವ ಪಾರ್ಕಿನ್‌ಸನ್‌ನಂಥ ಕಾಯಿಲೆಗಳನ್ನೂ ಕಾಳುಗಳು ನಿಯಂತ್ರಣದಲ್ಲಿ ಇಡಬಲ್ಲವು. ನನ್ನ ದೃಷ್ಟಿಯಿಂದ ಅಂದರೆ ಅಡುಗೆ ವಿಚಾರವಾಗಿ ಹೇಳುವುದಾದರೆ ಎಲ್ಲ ಬಗೆಯ ಪದಾರ್ಥಗಳಿಗೂ ಕಾಳುಗಳು ಹೊಂದಿಕೊಳ್ಳುತ್ತವೆ ಎನ್ನುವುದು. ಇವುಗಳ ಜತೆ ಯಾವ ತರಕಾರಿ ಬಳಸಿದರೂ ತೊಂದರೆ ಇಲ್ಲ!

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.