ಕಣ್ಣಲ್ಲಿ ಕಣ್ಣಿಡಿ

ಕಣ್ಣು ದೇಹದ ಯಾವುದೇ ಕಾಯಿಲೆಯನ್ನು ತೋರಿಸುವ ಕಿಟಕಿ. ಇದು ಮಧುಮೇಹಕ್ಕೂ ಅನ್ವಯಿಸುತ್ತದೆ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ...
ಕಣ್ಣಲ್ಲಿ ಕಣ್ಣಿಡಿ
Updated on: 

ಸಕ್ಕರೆ ಕಾಯಿಲೆ ಇರುವವರು ಕಣ್ಣಿನ ಬಗ್ಗೆ ಹೊಚ್ಚು ಜಾಗರೂಕತೆ ವಹಿಸುವುದು ಅಗತ್ಯ. ಜೂನ್ 27ರಂದು ವಿಶ್ವ ಮಧುಮೇಹಿಗಳ ದಿನ. ಆ ಹಿನ್ನೆಲೆಯಲ್ಲಿ ಈ ಲೇಖನ.

ಕಣ್ಣು ದೇಹದ ಯಾವುದೇ ಕಾಯಿಲೆಯನ್ನು ತೋರಿಸುವ ಕಿಟಕಿ. ಇದು ಮಧುಮೇಹಕ್ಕೂ ಅನ್ವಯಿಸುತ್ತದೆ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ ಹಾಗೂ ಔಷಧದ ಕ್ರಮಬದ್ಧ ಸೇವನೆಯಿಂದ ಮಧುಮೇಹ ನಿಯತ್ರಣದಲ್ಲಿಟ್ಟುಕೊಳ್ಳಬಹುದು. ಒಂದು ಅಂದಾಜಿನ ಪ್ರಕಾರ 120 ಕೋಟಿ ಜನಸಂಖ್ಯೆಯ ಭಾರತದಲ್ಲಿ 5 ಕೋಟಿ ಭಾರತೀಯರಿಗೆ ಮಧುಮೇಹ ಇದೆ.
ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರು ದೃಷ್ಟಿ ಕಳೆದುಕೊಳ್ಳುವ ಅಪಾಯ ಇದೆ. ಸಕ್ಕರೆ ಕಾಯಿಲೆಯಿಂದ ಕಣ್ಣಿಗೆ ಆಗುವ ತೊಂದರೆಯನ್ನು ಡಯಾಬಿಟಿಕ್ ರೆಟಿನೋಪತಿ ಎನ್ನುತ್ತಾರೆ. ಆರಂಭದ ಹಂತದಲ್ಲಿದ್ದಾಗ ಕೆಲವೊಮ್ಮೆ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಕೆಲವೊಮ್ಮೆ ಸ್ವಲ್ಪ ದೃಷ್ಟಿದೋಷ ಕಾಣಿಸಬಹುದು.  ಮಧುಮೇಹಿಗಳಿಗೆ ದೃಷ್ಟಿ ಮಂಜಾಗುತ್ತಿದೆ ಎನಿಸಿದಾಗ ತಕ್ಷಣವೇ ಕಣ್ಣಿನ ಪರೀಕ್ಷೆ ಮಾಡಿಸದೆ ಹೋದರೆ, ದೃಷ್ಟಿಯೂ ನಾಶವಾಗಬಹುದು.
ಡಯಾಬಿಟಿಕ್ ರೆಟಿನೋಪತಿ ಆದಾಗ ಕೆಲವೊಮ್ಮೆ ಕರಿಚುಕ್ಕಿ ಅಥವಾ ಗೆರೆಗಳು ಓಡಾಡಿದಂತೆ ಕಾಣಿಸಬಹುದು.  ಕೆಲವೊಮ್ಮೆ ದೃಷ್ಟಿ ಮಂಜಾಗಿ ಕಾಣಿಸಬಹುದು. ಕಪ್ಪು ಅಥವಾ ಖಾಲಿ ಜಾಗ ಕಾಣಿಸಬಹುದು. ತಕ್ಷಣ ದೃಷ್ಟಿಹೀನತೆ ಉಂಟಾಗಬಹುದು. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದಾಗ ಹೀಗಾಗುತ್ತದೆ. ಇದೆಲ್ಲಾ ಸಾಮಾನ್ಯವಾಗಿ ಎರಡೂ ಕಣ್ಣುಗಳನ್ನು ಬಾಧಿಸುತ್ತದೆ. ಹೀಗಾದಾಗ ಈ ಸಮಸ್ಯೆಯ ಬಗ್ಗೆ ತಕ್ಷಣ ನೇತ್ರತಜ್ಞರನ್ನು ಸಂಪರ್ಕಿಸಿ.
ಸಾಮಾನ್ಯವಾಗಿ ಸಕ್ಕರೆ ಅಂಶ ಜಾಸ್ತಿ ಆದಾಗ ಕಣ್ಣಿನಲ್ಲಿರುವ ಮಸೂರ ದಪ್ಪ ಆಗುತ್ತದೆ. ಅದರಿಂದಲೂ ದೃಷ್ಟಿ ಮಂಜಾಗಿ ಕಾಣಬಹುದು. ಹಾಗೇ ರಕ್ತದೊತ್ತಡ ಅಥವಾ ಕೊಲೆಸ್ಟರಾಲ್ ಹೆಚ್ಚಾದಾಗ, ಧೂಮಪಾನ ಮತ್ತು ಇತರ ತಂಬಾಕು ಉಪಯೋಗದಿಂದ ಡಯಾಬಿಟಿಕ್ ರೆಟಿನೋಪತಿ ಬರುವ ಸಂಭವವೂ ಹೆಚ್ಚು. ಕೆಲವೊಮ್ಮೆ ಗರ್ಭಿಣಿಯರಲ್ಲೂ ಇದು ಕಾಣಿಸಿಕೊಳ್ಳಬಹುದು. ಅಲ್ಲದೆ ತೀವ್ರತರವಾದ ಕಣ್ಣು ನೋವು ಬರಬಹುದು. ಹಾಗಾದರೆ ಅದನ್ನು ಗ್ಲುಕೋಮಾ ಎನ್ನಲಾಗುತ್ತದೆ. ಇಂಥ ಸಂದರ್ಭದಲ್ಲಿ ತಡಮಾಡದೆ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಬೇಕು.
ಸಕ್ಕರೆ ಕಾಯಿಲೆ ಇರುವವರು ತಮ್ಮ ಕಣ್ಣಿನ ಬಗ್ಗೆ ಕಾಳಜಿ ವಹಿಸಿ ಆಗಿಂದಾಗ್ಗೆ ತಪಾಸಣೆ ಮಾಡಿಸಿಕೊಂಡರೆ ಬದುಕು ಕತ್ತಲಾಗುವುದನ್ನು ತಡೆಯಲು ಸಾಧ್ಯ.

- ಡಾ. ನಿರಾ ಕಂಜಾನಿ
ವೈದ್ಯಕೀಯ ನಿರ್ದೇಶಕಿ, ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com