ಬೈಟುಕಾಫಿ

ಆಲೋಚನೆ, ಮಾತು, ಕಾರ್ಯ

Published On :

ಮನುಷ್ಯನ ಜೀವನ ಮೂರು ಮೂಲ ಪ್ರಕ್ರಿಯೆಗಳಲ್ಲಿ ನಡೆಯುತ್ತಿದೆ. ಆಲೋಚನೆ, ಮಾತು ಮತ್ತು ಕಾರ್ಯ. ಇವುಗಳಲ್ಲಿ ಮೂಲಭೂತವಾದುದು ಆಲೋಚನೆ. ಇದೊಂದು ಮನಸ್ಸಿನ ಅಮೂರ್ತ ಪ್ರಕ್ರಿಯೆ. ಉಳಿದ ಮಾತು ಮತ್ತು ಕಾರ್ಯಗಳು ಆಲೋಚನೆಯನ್ನು ಅವಲಂಬಿಸಿರುತ್ತವೆ. ಈ ಮೂರು ಕ್ರಿಯೆಗಳ ಮೇಲಿನ ಸಾಧನೆಯಿಂದ ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳಬಹುದು.
ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳೆರಡರಲ್ಲಿಯೂ ಶಕ್ತಿ ಸುಪ್ತವಾಗಿದೆ. ಇವು ಪ್ರಪಂಚವನ್ನೆಲ್ಲ ತುಂಬುವುವು. ಚಿಂತನೆಗಳು ಕ್ರಿಯಾರೂಪಕ್ಕೆ ಬರುವವರೆಗೂ ಚಿಂತನೆಗಳಾಗಿಯೇ ಉಳಿದಿರುತ್ತವೆ.  ಹಾಗೆಯೇ ಮಾತಿನ ಹಿಂದೆ ಶಕ್ತಿ ಇಲ್ಲದಿದ್ದರೆ ಬರೀ ಮಾತಿನಲ್ಲಿ ಏನಿದೆ? ನೀವು ಯಾವ ಭಾಷೆಯಲ್ಲಿ ಮಾತನಾಡುವಿರೊ, ಹೇಗೆ ವಿಷಯಗಳನ್ನು ಅಣಿಮಾಡಿಕೊಂಡಿರುವಿರೊ, ಅದರಿಂದೇನು ಪ್ರಯೋಜನ? ನೀವು ವ್ಯಾಕರಣಶುದ್ಧವಾಗಿ ಮಾತನಾಡುವಿರೊ, ಸುಂದರ ಪದಗಳನ್ನು ಜೋಡಿಸಿರುವಿರೊ ಇದನ್ನು ಕಟ್ಟಿಕೊಂಡು ಪ್ರಯೋಜನವೇನು? ಇತರರಿಗೆ ಕೊಡುವುದಕ್ಕೆ ನಿಮ್ಮಲ್ಲಿ ಏನಾದರೂ ಇದೆಯೆ, ಇಲ್ಲವೆ ಎಂಬುದೇ ಪ್ರಶ್ನೆ. ಇದು ಕೊಡುಕೊಳ್ಳುವ ಪ್ರಸಂಗ, ಸುಮ್ಮನೆ ಕೇಳುವುದಲ್ಲ. ಅದೇ ರೀತಿ ಯಾವುದೇ ಕೆಲಸ ಮಾಡುವಾಗ ನಿಮ್ಮ ಮನಸ್ಸು, ಹೃದಯ ನಿಮ್ಮ ಸರ್ವಸ್ವವನ್ನೂ ಆ ಕೆಲಸಕ್ಕೆ ಕೊಡಿ.
ಹೀಗೆ ಮನಸ್ಸಿನ ಮೂರು ಶಕ್ತಿಗಳಾದ ಆಲೋಚನೆ, ಮಾತು ಮತ್ತು ಕಾರ್ಯಗಳು ಉನ್ನತ ವ್ಯಕ್ತಿತ್ವದ ಆಧಾರಸ್ಥಂಭಗಳಾಗಿವೆ. ಇವು ಏಕಾಗ್ರತೆಯ ನಿಯಂತ್ರಣಕ್ಕೆ ಒಳಪಟ್ಟರೆ ಜೀವನವನ್ನು ಬೆಳಗುವ ತಾರೆಗಳಾಗುತ್ತವೆ.

-ಆನಂದ ಎಸ್.ಎನ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.