ಲೌಕಿಕ ಕಾರಂಜಿ; ಆಧ್ಯಾತ್ಮಿಕ ಸೆಲೆ
ಆಧುನಿಕ ಭಾರತ ಪಾಶ್ಚಾತ್ಯರ ಬಾಹ್ಯ ಸಂಸ್ಕೃತಿಯ ಪಡಿಯಚ್ಚು. ಲೌಕಿಕತೆ ಅದರ ಬಹುಮುಖ್ಯ ಲಕ್ಷಣ. ತೋರಿಕೆ ಅದರ ಸಾರ, ಹಣ ಅದರ ಕೇಂದ್ರಶಕ್ತಿ. ಅಲ್ಲಿ ಎಲ್ಲವೂ ಹಣದ ಸುತ್ತ ಸುತ್ತುತ್ತವೆ. ಆದರೆ ಭಾರತದ ಪರಂಪರೆಯಲ್ಲಿ ಆಧ್ಯಾತ್ಮಿಕತೆಯೇ ಕೇಂದ್ರವಾಗಿತ್ತು. ಹಣವಿಲ್ಲದೆಯೂ ಸುಖವಾಗಿ ಬದುಕಬಹುದಿತ್ತು. ಪಂಚಭೂತಗಳು ಭಗವಂತನು ನೀಡಿದ ಲೋಕದ ಸರ್ವಸ್ವವಾಗಿದ್ದವು. ಆದರೆ ಇಂದು ಅವು ವ್ಯಾಪಾರದ ವ್ಯಾಪ್ತಿಗೆ ಸೇರಿವೆ. ಭೂಮಿಗೆ ದುಡ್ಡು, ಬೆಳಕಿಗೆ ದುಡ್ಡು, ಬೆಂಕಿಗೆ ದುಡ್ಡು, ನೀರಿಗೆ ದುಡ್ಡು, ಗಾಳಿಗೆ ದುಡ್ಡು. ಎಲ್ಲವೂ ಹಣಮಯ. ದುರಂತವೆಂದರೆ ಆ ಹಣ ಆನಂದಕ್ಕಾಗಿಯಲ್ಲ, ಪ್ರತಿಷ್ಠೆಗಾಗಿ. ಇಂತಹ ಬಾಹ್ಯಬಿಂಬಿತ ಪ್ರತಿಷ್ಠೆಯ ಲೌಕಿಕತೆಯಿಂದ, ನಶ್ವರತೆಯಿಂದ ಮುಕ್ತರಾಗಿ. ಬದುಕಿನ ಬಾಹ್ಯದಲ್ಲಿ ಲೌಕಿಕ ಕಾರಂಜಿಯಿದ್ದರೂ ಆಂತರ್ಯದಲ್ಲಿ ಆಧ್ಯಾತ್ಮಿಕತೆಯ ಸೆಲೆಯನ್ನು ಜೀವಂತವಾಗಿರಿಸಿ.
ಪಾಶ್ಚಾತ್ಯ ಸಾಮಾಜಿಕ ಜೀವನ ಒಂದು ನಗೆಯ ಬುಗ್ಗೆಯಂತೆ ಇದೆ. ಆದರೆ ಅದರ ಕೆಳಗೆ ಇರುವುದು ಗೋಳು. ಅದೊಂದು ದುರಂತದಲ್ಲಿ ಕೊನೆಗಾಣುವುದು. ತಮಾಷೆ, ನಗು ಇವೆಲ್ಲ ಮೇಲೆ ಮಾತ್ರ. ಆದರೆ ನಿಜವಾಗಿ ಅದರಲ್ಲಿ ತುಂಬಿರುವುದು ಯಾತನೆ. ಆದರೆ ಭರತಖಂಡದಲ್ಲಿ ಹೊರಗೆಲ್ಲ ದುಃಖ, ಸಂಕಟ; ಆದರೆ ಒಳಗೆ ಸ್ವಚ್ಛಂದ, ಆನಂದ.
ತ್ಯಾಗದಿಂದ ಮಾತ್ರ ಅಮೃತತ್ವವನ್ನು ಪಡೆಯಲು ಸಾಧ್ಯ, ಧನದಿಂದಲ್ಲ. ನಾವು ನಮ್ಮ ಸಮಸ್ಯೆಯನ್ನು ಯುಗಯುಗಗಳ ಹಿಂದೆಯೇ ಬಗೆಹರಿಸಿಕೊಂಡಿರುವೆವು. ನಮ್ಮ ಪರಿಹಾರೋಪಾಯವೇ ಅಲೌಕಿಕತೆ ಮತ್ತು ತ್ಯಾಗ.
-ಆನಂದ ಎಸ್.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

