ಶ್ವಾನಗಳ ಕಾರ್ಯವೈಖರಿ
ಶ್ವಾನ ಖರೀದಿಗೆ ಒಪ್ಪಿಗೆಯಾದ ನಂತರ ಅದನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತದೆ. ಶ್ವಾನದ ಮರಿ ಕೊಂಡು ಬಂದ ನಂತರ ಅವುಗಳಿಗೆ ಪ್ರತಿನಿತ್ಯ ಶ್ವಾನದಳ ಕೇಂದ್ರದಲ್ಲಿ ತರಬೇತಿ ನೀಡುತ್ತಾರೆ. ಹೀಗೆ ಸುಮಾರು 9 ರಿಂದ 10 ತಿಂಗಳು ತರಬೇತಿ ನೀಡಲಾಗುತ್ತದೆ.ತರಬೇತಿ ನಂತರ ಶ್ವಾನಗಳು ಕೆಲಸಕ್ಕೆ ಫಿಟ್ ಎಂದು ಅರ್ಥ. ತರಬೇತಿ ವೇಳೆ ಅವುಗಳಿಗೆ ಅವರದ್ದೇ ಆದ ಕೆಲವು ಪದಗಳನ್ನು ಅಂದರೆ, ದೈನಂದಿನ ಪದಬಳಕೆ ಬಗ್ಗೆ ಕಲಿಸಿಕೊಡಲಾಗುತ್ತದೆ. 'ಕಮ್', 'ಸಿಟ್', 'ಗೋ', 'ಟೇಕ್', 'ಅಪ್' ಮೊದಲಾದ ಪದಗಳ ಜತೆಗೆ ಪೊಲೀಸರು ಬಳಸುವ ಭಾಷೆಯನ್ನು ಕಲಿಸಿಕೊಡುತ್ತಾರೆ. ಅದನ್ನು ಕಲಿಸಲು ಶಾಲೆಗೆ ಕಳುಹಿಸುವುದಿಲ್ಲ. ಬದಲಾಗಿ ಪ್ರತಿ ನಾಯಿಗೆ ಒಬ್ಬ ಶಿಕ್ಷಕ ಇರುತ್ತಾನೆ. ಪೊಲೀಸರೇ ಅವುಗಳಿಗೆ ಶಿಕ್ಷಕ. ಒಂದು ನಾಯಿಗೆ ಒಬ್ಬ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿರುತ್ತದೆ. ಅವರನ್ನು ಹ್ಯಾಂಡ್ಲರ್ ಎನ್ನುತ್ತಾರೆ. ಹಾಗಾಗಿ ಆ ಶ್ವಾನದ ಸಂಪೂರ್ಣ ಜವಾಬ್ದಾರಿ ಅವರದ್ದಾಗಿರುತ್ತದೆ. ಪೊಲೀಸ್ ಶ್ವಾನಗಳ ಕಾರ್ಯವೈಖರಿ ಬೇರೆ ಶ್ವಾನಗಳಂತಲ್ಲ. ಆಹಾರ ಶೈಲಿಯೂ ಅವುಗಳಿಗೆ ಬೇರೆ ಇರುತ್ತದೆ. ಅದೇ ರೀತಿ ಆರೋಗ್ಯ ಕಾಪಾಡಿಕೊಳ್ಳಬೇಕು. ಆದ್ದರಿಂದ ಶ್ವಾನಗಳಿಗೆ ಪ್ರತಿನಿತ್ಯ ಹಾಲು, ಮೊಟ್ಟೆ, ರಾಗಿ ಅಥವಾ ರವೆ ಗಂಜಿ, ಅನ್ನ, ಮಾಂಸ, ಕ್ಯಾಲ್ಷಿಯಂ ಇರುವ ಟಾನಿಕ್ ಸೇರಿದಂತೆ ಆರೋಗ್ಯ ಕಾಪಾಡಲು ಉತ್ತಮ ಆಹಾರ ನೀಡಲಾಗುತ್ತದೆ.
ಅವುಗಳಿಗೆ ಪ್ರತ್ಯೇಕ ಕೆನಲ್ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ರಾತ್ರಿ ತಂಗುತ್ತವೆ. ಪಾಠದ ಜತೆಗೆ ವ್ಯಾಯಾಮವೂ ಇರುತ್ತದೆ. ಕೆಲವು ಪ್ರಕರಣಗಳಲ್ಲಿ ಶ್ವಾನ ಜಿಗಿಯುವುದು, ಹತ್ತುವುದು, ನುಸುಳುವುದು ಮಾಡಬೇಕಾಗುತ್ತದೆ. ಆದ್ದರಿಂದ ಅವುಗಳಿಗಾಗಿ ಶ್ವಾನದಳ ಕೇಂದ್ರದಲ್ಲಿ ವ್ಯಾಯಾಮಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

