ಫುಡ್ನಿಂದ ಹೇಗೆ ಅಲರ್ಜಿ ಆಗುತ್ತದೆ?
'ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು' ಎಂದಿದ್ದಾರೆ ಕವಿ ಡಿ.ವಿ. ಗುಂಡಪ್ಪನವರು. ಹಳೆಯದು, ಹೊಸತು ಪರಸ್ಪರ ಬೆರೆತು ಸಾಗಿದರೇನೇ ಸೊಬಗು. ಫುಡ್ ಅಲರ್ಜಿ ವಿಚಾರದಲ್ಲೂ ಅದೇ ರೀತಿ. ದಶಕಗಳ ಹಿಂದೆ ವೈದ್ಯ ವೃತ್ತಿಯಲ್ಲಿದ್ದವರು ತಮ್ಮ ಅನುಭವದ ನೆಲೆಯಲ್ಲಿ ಕಂಡುಕೊಂಡಿದ್ದು ಸತ್ಯ ಎನ್ನುವುದನ್ನು ಹೊಸ ಪೀಳಿಗೆಯ ಸಂಶೋಧಕರು ವೈಜ್ಞಾನಿಕ ಎಂದು ನಿರೂಪಿಸಿದರು. ಕಾಲಕ್ರಮೇಣ ಫುಡ್ ಅಲರ್ಜಿಯನ್ನು ಪತ್ತೆ ಮಾಡುವುದು ಮತ್ತು ಅದಕ್ಕೆ ಸಂಬಂಧಿಸಿದ ಸಿದ್ಧಾಂತಗಳಲ್ಲೂ ಬದಲಾವಣೆಗಳಾದವು. ಆಗೆಲ್ಲಾ ವೈದ್ಯರು ಫುಡ್ ಅಲರ್ಜಿ ಪತ್ತೆಗೆ ಅನುಸರಿಸುತ್ತಿದ್ದ ಮಾನದಂಡಗಳೇ ಬೇರೆ ಇದ್ದವು. ಏನೇನು ತಿಂದಿರಿ? ತಿಂದ ತಕ್ಷಣದಲ್ಲಿ ಏನೇನು ಪ್ರತಿಕ್ರಿಯೆಗಳ ಅನುಭವ ನಿಮಗೆ ಆಯಿತು ಎನ್ನುವುದನ್ನೆಲ್ಲ ನೆನಪಿಸಿಕೊಂಡು ಹೇಳಬೇಕಿತ್ತು. ತಿನಿಸನ್ನು ಬಾಯಲ್ಲಿ ಇಟ್ಟುಕೊಂಡಾಗ ತುರಿಕೆ ಆಯಿತೆ? ತಿಂದ ಸ್ವಲ್ಪ ಹೊತ್ತಿನಲ್ಲೇ ಚರ್ಮದ ಮೇಲೆ ಕೆಂಪು ಗುಳ್ಳೆಗಳಾದವಾ? ಅಸ್ತಮಾದಂಥ ಸಮಸ್ಯೆ ಆಯಿತಾ? ಇವೇ ಮೊದಲಾದ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಅದಾದ ಬಳಿಕ ಚರ್ಮ ಮತ್ತು ರಕ್ತ ತಪಾಸಣೆ ನಡೆಸುತ್ತಿದ್ದರು. ಅಲ್ಲಿ ಪಾಸಿಟಿವ್ ಬಂದರೆ ಮಾತ್ರವೇ ಫುಡ್ ಅಲರ್ಜಿ ಆಗಿದೆ ಎನ್ನುವ ತೀರ್ಮಾನಕ್ಕೆ ಬರುತ್ತಿದ್ದರು.
ಫುಡ್ ಅಲರ್ಜಿ ಹೇಗೆ ಆಗುತ್ತದೆ? ಕೆಲವೊಂದು ಆಹಾರ, ತಿನಿಸುಗಳನ್ನು ಸೇವಿಸಿದಾಗ ನಮ್ಮ ಶರೀರದ ರೋಗ ನಿರೋಧಕ ವ್ಯವಸ್ಥೆ ಅತಿಯಾಗಿ ಪ್ರತಿಕ್ರಿಯಿಸುತ್ತದೆ. ಆಹಾರದಲ್ಲಿ ತಮಗೆ ಆಗದ ಪದಾರ್ಥಗಳಿವೆ ಎನ್ನುವ ತೀರ್ಮಾನಕ್ಕೆ ಬರುವ ರೋಗ ನಿರೋಧಕಗಳು ಅದಕ್ಕೆ ಪ್ರತಿಕಾಯಗಳನ್ನು ಸೃಷ್ಟಿಸಿ ಬಿಡುಗಡೆ ಮಾಡುವ ಕಾರ್ಯಕ್ಕೆ ಮುಂದಾಗುತ್ತವೆ. ಆ ಪ್ರತಿಕಾಯಗಳನ್ನು ಇಮ್ಯುನೊಗ್ಲೋಬಿನ್ ಇ ಅಥವಾ ಐ್ಜಊ ಎನ್ನುತ್ತೇವೆ. ಪ್ರತಿಕಾಯಗಳ ಜತೆಗೆ ಹಿಸ್ಟಮಿನ್ ಮತ್ತಿತರ ರಾಸಾಯನಿಕಗಳನ್ನೂ ಬಿಡುಗಡೆ ಮಾಡುತ್ತವೆ. ಇವುಗಳ ಕೆಲಸ ಬಾಹ್ಯ ಶಕ್ತಿಗಳನ್ನು ಹತ್ತಿಕ್ಕುವುದು. ಇವು ಅಲರ್ಜಿಯ ಲಕ್ಷಣಗಳನ್ನು ಉತ್ತೇಜಿಸುತ್ತವೆ. ಸಾಂಪ್ರದಾಯಿಕ ಪತ್ತೆಯಲ್ಲಿ ಐ್ಜಊ ಕಂಡುಬಂದರೆ ಮಾತ್ರವೇ ಅದನ್ನು ಫುಡ್ ಅಲರ್ಜಿ ಎಂದು ಪರಿಗಣಿಸಲಾಗುತ್ತಿತ್ತು. ಒಮ್ಮೊಮ್ಮೆ ರೋಗನಿರೋಧಕಗಳು ಆಹಾರ ಪದಾರ್ಥಗಳಲ್ಲಿನ ಕಣಗಳನ್ನು ತಪ್ಪಾಗಿ ನಮ್ಮ ವಿರೋಧಿ ಎಂದು ಗ್ರಹಿಸಿ ಕಾರ್ಯೋನ್ಮುಖವಾಗಿಬಿಡುತ್ತವೆ. ಆಕಳ ಹಾಲು ಮತ್ತು ಶೇಂಗಾ ವಿಚಾರದಲ್ಲಿ ಆಗುವುದು ಹೀಗೆಯೇ. ಅವುಗಳಲ್ಲಿನ ಬ್ಯಾಕ್ಟೀರಿಯಾ, ವೈರಸ್ಗಳನ್ನು ರೋಗನಿರೋಧಕಗಳು ತಮ್ಮ ಶತ್ರುಗಳಂತೆ ಭಾವಿಸುತ್ತವೆ. ಇದು ರಾಸಾಯನಿಕ ಕ್ರಿಯೆಗಳ ಸರಪಳಿಗೆ ಹಾದಿ ಮಾಡಿಕೊಡುತ್ತದೆ. ಆಗ ಅಲರ್ಜಿಯ ಲಕ್ಷಣಗಳು ಗೋಚರವಾಗುತ್ತವೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

